Select Your Language

Notifications

webdunia
webdunia
webdunia
webdunia

ಬಿಜೆಪಿಯನ್ನು ಒಪ್ಪುತ್ತೇನೆ, ಆದ್ರೆ ಆರ್‌ಎಸ್‌ಎಸ್ ಸಿದ್ಧಾಂತ ಒಪ್ಪುವುದಿಲ್ಲ: ಬಿ.ಆರ್.ಪಾಟೀಲ್

ಬಿಜೆಪಿಯನ್ನು ಒಪ್ಪುತ್ತೇನೆ, ಆದ್ರೆ ಆರ್‌ಎಸ್‌ಎಸ್ ಸಿದ್ಧಾಂತ ಒಪ್ಪುವುದಿಲ್ಲ: ಬಿ.ಆರ್.ಪಾಟೀಲ್
ಬೆಂಗಳೂರು , ಸೋಮವಾರ, 6 ಜೂನ್ 2016 (18:08 IST)
ನಾನು ರಾಜಕೀಯವಾಗಿ ಬಿಜೆಪಿಯನ್ನು ಒಪ್ಪಿಕೊಳ್ಳುತ್ತೇನೆ ಆದರೆ ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂದು ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
 
ರಾಜ್ಯಸಭೆ ಚುನಾವಣೆಗೂ ರೆಸಾರ್ಟ್ ರಾಜಕಾರಣ ಕಾಲಿಟ್ಟಿದ್ದು, 14 ಮಂದಿ ಪಕ್ಷೇತರ ಶಾಸಕರು ಮುಂಬೈಗೆ ತೆರಳಿದ್ದಾರೆ ಎಂಬ ವದಂತಿ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಬಿ.ಆರ್.ಪಾಟೀಲ್, ನಾನು ಎಲ್ಲಿಗೂ ಓಡಿ ಹೋಗಿಲ್ಲ. ಇಲ್ಲೇ ಇದ್ದೇನೆ. ನಾವು ರೆಸಾರ್ಟ್ ರಾಜಕಾರಣಕ್ಕಾಗಿ ಮುಂಬೈಗೆ ತೆರಳಿದ್ದೇನೆ ಎಂಬುದು ಸುಳ್ಳು ಸುದ್ದಿ ಎಂದು ಸ್ವಷ್ಟಪಡಿಸಿದ್ದಾರೆ.
 
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ನಾನು ಜನತಾ ಪರಿವಾರದಿಂದ ಬೆಳೆದು ಬಂದಿದ್ದೇವೆ. ಮುಖ್ಯಮಂತ್ರಿಯವರು ಶೋಕಿ ಮಾಡುವಂತಹ ವ್ಯಕ್ತಿಯಲ್ಲ. ಅವರು ನೇರ ನುಡಿ ಸ್ವಭಾವದವರು. ಸಮಾಜದ ವ್ಯವಸ್ಥೆಯನ್ನು ಬದಲಾಯಿಸಲು ನಾವು ರಾಜಕೀಯಕ್ಕೆ ಬಂದಿದ್ದೇವೆ. ಆದರೆ, ಇಂದಿನ ವ್ಯವಸ್ಥೆ ತಲೆ ಕೆಳಗಾಗಿದ್ದು ಏನು ತೋಚದಂತಾಗಿದೆ ಎಂದು ಬಿ.ಆರ್.ಪಾಟೀಲ್ ಹೇಳಿದ್ದಾರೆ.
 
ರಾಜಸಭೆ ಚುನಾವಣೆಗೆ ಮತ ನೀಡಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಪ್ರಕರಣ ಕುರಿತು ಸಂಪೂರ್ಣ ತನಿಖೆಯಾಗಲಿ ಎಂದು ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಓಲೈಕೆ ಮುಂದುವರೆಸಿದ ಬಿಜೆಪಿ