ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದ ಎಐಡಿಎಂಕೆ ಪಕ್ಷವನ್ನು ಎನ್‌ಡಿಎ ತೆಕ್ಕೆಗೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮುಂದುವರೆಸಿದೆ. ಎಐಡಿಎಂಕೆ ಸಂಸತ್ತಿನಲ್ಲಿ ಒಟ್ಟು 50 ಸಂಸದರನ್ನು ಹೊಂದಿದ್ದು ಅದರಲ್ಲಿ 37 ಜನ ಲೋಕಸಭಾ ಸಂಸದರಾಗಿದ್ದಾರೆ. ಕೆಳಮನೆಯಲ್ಲಿ ಮೂರನೆಯ ದೊಡ್ಡ ಪಕ್ಷದ ಸ್ಥಾನವನ್ನು ಪಡೆದುಕೊಂಡಿರುವ ಎಐಡಿಎಂಕೆಯನ್ನು ತಮ್ಮ ಮಿತ್ರಕೂಟಕ್ಕೆ ಸೇರಿಸಿಕೊಳ್ಳಲು ಜಯಾ ಅವರ ಮನ ಒಲಿಸುವಲ್ಲಿ ತಾವು ಸಫಲಾಗುತ್ತೇವೆ ಎಂಬ ಆಶಯ ಬಿಜೆಪಿಯದು.
ಮಿತ್ರಪಕ್ಷವಾಗಿರದಿದ್ದರೂ ಎಐಡಿಎಂಕೆ ಸಂಸತ್ತಿನಲ್ಲಿ ಎಲ್ಲ ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತದೆ. ಆದರೆ ಎನ್‌ಡಿಎಯಲ್ಲಿ ಎಐಡಿಎಂಕೆ ಉಪಸ್ಥಿತಿ ಕಾಂಗ್ರೆಸ್ ವಿರೋಧಿ ಶಕ್ತಿಯಾಗಿ ಮೈತ್ರಿಕೂಟಕ್ಕೆ ಹೆಚ್ಚು ಶಕ್ತಿಯನ್ನು ತುಂಬುತ್ತದೆ ಎಂಬುದು ಬಿಜೆಪಿ ನಂಬಿಕೆ. ಹೀಗಾಗಿ ಬಿಜೆಪಿ ನಾಯಕರು ಪ್ರಾದೇಶಿಕ ಪಕ್ಷದ ಜತೆ ಔಪಚಾರಿಕ ಸ್ನೇಹವನ್ನು ಬಯಸುತ್ತಿದ್ದಾರೆ.
ಎಐಡಿಎಂಕೆ ರಾಜ್ಯಸಭೆಯಲ್ಲಿ 13 ಸದಸ್ಯರನ್ನು ( ತಮಿಳುನಾಡು 12, ಪುಜುಚೇರಿ-1) ಹೊಂದಿದ್ದು ಲೋಕಸಭೆಯಲ್ಲಿ 37 ಸಂಸದರನ್ನು ಹೊಂದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಬಲ 44.
ರಾಜ್ಯಸಭೆಯಲ್ಲಿ ಬಿಜೆಪಿ ಅಲ್ಪಬಲವನ್ನು ಹೊಂದಿದ್ದು 13 ಜನ ಸಂಸದರುಳ್ಳ ಎಐಡಿಎಂಕೆಯನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡು ಎನ್‌ಡಿಎಯನ್ನು ಬಲಗೊಳಿಸುವ ಗುರಿಯನ್ನದು ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.