Webdunia - Bharat's app for daily news and videos

Install App

ಮೆಡಿಕಲ್ ಸೀಟ್ ಸಿಗದಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

Webdunia
ಮಂಗಳವಾರ, 19 ಸೆಪ್ಟಂಬರ್ 2017 (14:45 IST)
ಹೈದರಾಬಾದ್: ಮೆಡಿಕಲ್ ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನ ಕೊಂದು ಪತಿಯೇ ಬೆಂಕಿ ಹಚ್ಚಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ನಾಗೊಳೆಯಲ್ಲಿ ನಡೆದಿದೆ.

ಹಾರಿಕಾ(20) ಹತ್ಯೆಯಾದ ದುರ್ದೈವಿ. ಹಾರಿಕಾಳ ನಿರುದ್ಯೋಗಿ ಪತಿ ಕೆ.ಋಷಿಕುಮಾರ್ ಈ ಕೃತ್ಯವೆಸಗಿದ್ದಾನೆ. ಈ ಕುರಿತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಋಷಿಕುಮಾರ್ ಮತ್ತು ಆತನ ಪೋಷಕರನ್ನು ಬಂಧಿಸಿದ್ದಾರೆ.

ಹಾರಿಕಾ ಮತ್ತು ಋಷಿಕುಮಾರ್ 2 ವರ್ಷದ ಹಿಂದೆ ವಿವಾಹವಾಗಿದ್ದರು. ಮೂಲತಃ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯವರಾದ ದಂಪತಿ, ಮದುವೆಯಾದ ಬಳಿಕ ಹೈದರಾಬಾದ್ ನ ನಾಗೊಳೆಯ ರಾಕ್ ಟೌನ್ ಕಾಲೋನಿಯಲ್ಲಿ ನೆಲೆಸಿದ್ದರು.  ಹಾರಿಕಾ ವರ್ಷದಿಂದ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಗಾಗಿ ಓದುತ್ತಿದ್ದರು. ಪರೀಕ್ಷೆ ಬರೆದಿದ್ದ ಹಾರಿಕಾ ಪಾಸ್ ಆಗಿರಲಿಲ್ಲ. ಒಂದು ವೇಳೆ ಫೇಲ್ ಆದರೆ ಡಿವೋರ್ಸ್ ನೀಡುವುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಆಕೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದನಂತೆ. ಇತ್ತೀಚೆಗೆ ಹಾರಿಕಾ ಕಾಮಿನೇನಿ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ತೆಗೆದುಕೊಂಡಿದ್ದು, ಇದು ಆಕೆಯ ಪತಿಗೆ ಇಷ್ಟವಿರಲಿಲ್ಲವೆಂದು ಅಸಿಸ್ಟೆಂಟ್ ಕಮಿಷನರ್ ಪಿ.ವೇಣುಗೋಪಾಲ್ ರಾವ್ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿದ್ದ ಋಉಷಿಕುಮಾರ್ ಇತ್ತೀಚೆಗಷ್ಟೆ ಉದ್ಯೋಗ ಕಳೆದುಕೊಂಡಿದ್ದ. ಹೀಗಾಗಿ ಸ್ವಂತ ಉದ್ಯೋಗ ಮಾಡುವ ದೃಷ್ಟಿಯಿಂದ ಪತ್ನಿ ಬಳಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಪೊಲೀಸರಿಗೆ ಹಾರಿಕಾ ಪೋಷಕರು ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

ಧರ್ಮಸ್ಥಳ: ಶ್ವಾನ ಪಡೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಒಂದನೇ ಪಾಯಿಂಟ್ಸ್‌ನ ಹುಡುಕಾಟದಲ್ಲಿ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments