Publish Date: Sun, 12 Jan 2020 (21:18 IST)
Updated Date: Sun, 12 Jan 2020 (21:21 IST)
ವಾಹನಗಳ ಸವಾರರು ಫೆಬ್ರವರಿ 1 ರಿಂದ ತುಸು ಎಚ್ಚರ ಹಾಗೂ ಹುಷಾರ್ ಆಗಿರಬೇಕಾಗುತ್ತದೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ದ್ವಿಚಕ್ರ ಸವಾರರು ಫೆ. 1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕೆಂಬ ನಿಯಮ ರೂಪಿಸಲಾಗಿದೆ.
ವಾಹನ ಸವಾರರು ಈ ನಿಯಮವನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಹಾಗೂ ಅಪಘಾತ ಮುಕ್ತ ಪಟ್ಟಣ ನಿರ್ಮಾಣಕ್ಕೆ ಸಹಕಾರ ನೀಡಬೇಕು.
ಹೀಗಂತ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಹೇಳಿದ್ದಾರೆ.
ವಾಹನಗಳ ದಾಖಲಾತಿ, ಲೈಸೆನ್ಸ್, ಇನ್ಸೂರೆನ್ಸ್, ಹೆಲ್ಮೆಟ್, ಎಮಿಷನ್ ಟೆಸ್ಟಿಂಗ್ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
ಒನ್ ವೇನಲ್ಲಿ ಹೋಗೋದು, ತ್ರಿಬಲ್ ರೈಡಿಂಗ್, ಅಪ್ರಾಪ್ತರು ಚಾಲನೆ ಮಾಡಿದ್ರೆ ದಂಡ ವಿಧಿಸೋದಾಗಿ ಹೇಳಿದ್ದಾರೆ.