ವರದಕ್ಷಿಣೆ ತರಲಿಲ್ಲವೆಂದು ಪತ್ನಿ ನಗ್ನ ಫೋಟೋ ಯೂ ಟ್ಯೂಬ್ ಗೆ ಹಾಕುವ ಬೆದರಿಕೆ!

ಭಾನುವಾರ, 1 ಜುಲೈ 2018 (11:04 IST)
ಬೆಂಗಳೂರು: ವರದಕ್ಷಿಣೆ ಕಿರುಕುಳದ ಮತ್ತೊಂದು ರೂಪ ಗಿರಿನಗರ ಠಾಣೆಯಲ್ಲಿ ದಾಖಲಾಗಿದೆ. ಪತಿ ಮಹಾಶಯನೊಬ್ಬ ಪತ್ನಿಗೆ ನಗ್ನ ಫೋಟೋಗಳನ್ನು ಯೂ ಟ್ಯೂಬ್ ಗೆ ಹಾಕುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ.

ಪತಿ ಕೃಷ್ಣಮೂರ್ತಿ ಎಂಬಾತನ ಜತೆ ಸಂತ್ರಸ್ತೆ ಮಹಿಳೆಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ವರದಕ್ಷಿಣೆ ತರುವಂತೆ ಪತಿ ಹಾಗೂ ಮನೆಯವರು ಬಲವಂತ ಮಾಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಪಾರ್ಟಿ ಮಾಡಿ ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿದ್ದ ಕೃಷ್ಣಮೂರ್ತಿ ಆ ಸಂದರ್ಭದಲ್ಲಿ ಪತ್ನಿಯ ನಗ್ನ ಫೋಟೋಗಳನ್ನು ಸೆರೆಹಿಡಿದಿದ್ದ. 10 ಲಕ್ಷ ರೂ. ನಗದು ಮತ್ತು ಅರ್ಧ ಕೆಜಿ ಚಿನ್ನ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ ಆತ ವರದಕ್ಷಿಣೆ ತರದಿದ್ದರೆ ಈ ನಗ್ನ ಫೋಟೋಗಳನ್ನೇ ಯೂ ಟ್ಯೂಬ್ ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೀಗ ಪತಿ ಕೃಷ್ಣಮೂರ್ತಿ ಮತ್ತು ಮನೆಯವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಹುಲ್ ಗಾಂಧಿ ಟ್ವೀಟ್ ರಿಟ್ವೀಟ್ ಮಾಡಿದ ವಿಜಯ್ ಮಲ್ಯ! ಇದುವೇ ಬಿಜೆಪಿಗೆ ಈಗ ಅಸ್ತ್ರ