Publish Date: Sat, 28 Oct 2017 (13:32 IST)
Updated Date: Sat, 28 Oct 2017 (13:37 IST)
ಕಲಬುರ್ಗಿ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಅಫ್ಜಲ್ ಪುರ ಪಟ್ಟಣದಲ್ಲಿ ನಡೆದಿದೆ.
ಚಂದ್ರಕಲಾ ಹಿರೇಮಠ್(25) ಹತ್ಯೆಯಾದ ನತದೃಷ್ಟ ಮಹಿಳೆ. ಆರು ವರ್ಷದ ಹಿಂದೆ ವೈಜನಾಥ ಹಿರೇಮಠ ಎಂಬಾತನಿಂದಿಗೆ ಚಂದ್ರಕಲಾ ಮದುವೆಯಾಗಿತ್ತು. ದುರಾದೃಷ್ಟಕ್ಕೆ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ನಡುವೆ ಆಗಾಗ ಕಲಹ ನಡೆಯುತಿತ್ತು ಎನ್ನಲಾಗಿದೆ.
ಎಂದಿನಂತೆ ದಂಪತಿಗಳ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿ ಪತಿ ವೈಜನಾಥ ತನ್ನ ಪತ್ನಿ ಚಂದ್ರಕಲಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿ ವೈಜನಾಥನನ್ನು ಬಂಧಿಸಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.