Webdunia - Bharat's app for daily news and videos

Install App

ಒಡಿಶಾದತ್ತ ‘ಅಸಾನಿ’ ಚಂಡಮಾರುತ

Webdunia
ಸೋಮವಾರ, 9 ಮೇ 2022 (20:31 IST)
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ಅಸಾನಿ’ ಚಂಡಮಾರುತ ಭೀಕರವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ ನೀಡಿದೆ. ಈ ಚಂಡಮಾರುತ ಮುಂದಿನ 6 ಗಂಟೆಗಳಲ್ಲಿ ತನ್ನ ಗಂಭೀರ ಪರಿಣಾಮಗಳನ್ನು ತೋರಿಸಲಿದೆ.. ಉತ್ತರ-ಈಶಾನ್ಯಕ್ಕೆ ತಿರುಗುವ ಸಾಧ್ಯತೆಯಿದೆ ಮತ್ತು ಒಡಿಶಾ ಕರಾವಳಿಯಿಂದ ಬಂಗಾಳ ಕೊಲ್ಲಿಯಲ್ಲಿ ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ..ಕಳೆದ 6 ಗಂಟೆಗಳಲ್ಲಿ ಈ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 14 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದಿಂದಾಗಿ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ನಾಳೆಯಿಂದ ಬಲವಾದ ಗಾಳಿ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

UPSC: ಕರ್ನಾಟಕದ ರೈತರ ಮಕ್ಕಳ ಸಾಧನೆ, ಹಾವೇರಿ ವೈದ್ಯ ಸಚಿನ್ ಗುತ್ತೂರಗೆ 41ನೇ ರ‍್ಯಾಂಕ್​

Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆ: ಮಾಜಿ ಸಂಸದನಿಗೆ ಪರಪ್ಪನ ಅಗ್ರಹಾರವೇ ಗತಿ

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಮುಂದಿನ ಸುದ್ದಿ
Show comments