ನೂರಾರು ಸಮಾಧಿ ಧ್ವಂಸ ಮಾಡಿದ್ಯಾರು?

ಮಂಗಳವಾರ, 21 ಮೇ 2019 (11:15 IST)
ಒಂದು ಸಮುದಾಯಕ್ಕೆ ಸೇರಿದ ಸ್ಮಶಾನದಲ್ಲಿ ಸಮಾಧಿಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಹತ್ತಾರು ಸಮಾಧಿಗಳನ್ನ ಧ್ವಂಸಗೊಳಿಸಿರುವ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಘಟನೆ ನಡೆದಿದೆ.

ಕೋಮು ಗಲಭೆ ಸೃಷ್ಟಿಸಲು ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ತಿಂಗಳಲ್ಲಿ ನಡೆದ ದುರ್ಘಟನೆ ಇದಾಗಿದೆ.

ಘಟನೆಯಿಂದ ಆಕ್ರೋಶ ಭರಿತರಾಗಿದ್ದಾರೆ ಮುಸ್ಲಿಂ ಸಮುದಾಯದ ಜನರು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ಭದ್ರತೆಗಾಗಿ ನೂರಕ್ಕು ಹೆಚ್ಚು ಸಿಬ್ಬಂದಿ, 4 ಪಿಎಸ್ಐ 2 ಸಿಪಿಐ, ಎರಡು ಡಿ ಆರ್ ವಾಹನ ಸಿಬ್ಬಂದಿಯನ್ನ ನಿಯೋಜಿಸಿದ್ದಾರೆ ಬೆಂಗಳೂರು ಗ್ರಾಮಾಂತರ ಎಸ್ಪಿ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿರುಗಾಳಿಗೆ ಮಳೆಗೆ ಬೆಚ್ಚಿಬಿದ್ದ ಕೋಟೆ ನಗರಿ ಜನ