Publish Date: Sun, 19 Jul 2020 (14:22 IST)
Updated Date: Sun, 19 Jul 2020 (14:24 IST)
ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಂಡೇ ಲಾಕ್ ಡೌನ್ ಉಲ್ಲಂಘನೆ ಮಾಡಿಸದವರ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಜನರು ಬೆಂಬಲ ನೀಡಿ ಬಹುತೇಕರು ಮನೆಯಲ್ಲೇ ಉಳಿದಿದ್ದರೆ, ವಿನಾಕಾರಣ ಹೊರಗೆ ಬಂದಿದ್ದವರ ವಾಹನಗಳನ್ನು ಪೊಲೀಸರು ಮುಲಾಜಿಲ್ಲದೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಮದ್ಯಾಹ್ನದವರೆಗೆ 150 ಕ್ಕೂ ಹೆಚ್ಚು ಬೈಕ್ ಗಳನ್ನು ವಶಪಡಿಕೊಳ್ಳಲಾಗಿತ್ತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ವಾಣಿಜ್ಯ ವಹಿವಾಟಿನ ಎಲ್ಲಾ ಮಳಿಗೆಗಳು ಸಂಪೂರ್ಣ ಬಂದ್ ಮಾಡಿದೆ.
ಬಳ್ಳಾರಿ ನಗರದ ಬಹುತೇಕ ಪ್ರಮುಖ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್‍ಗಳನ್ನು ಇರಿಸಿ, ಪಟ್ಟಿ ಕಟ್ಟಿ ಬಂದ್ ಮಾಡಿದ್ದರು. ಆದರೂ ವಿನಾಕಾರಣ ಬೈಕ್ ಗಳನ್ನು ತೆಗೆದುಕೊಂಡು ಬಂದವರನ್ನು ಗಡಗಿ ಚನ್ನಪ್ಪ ವೃತ್ತ, ಗಾಂಧಿ ನಗರ ಠಾಣೆ ಬಳಿ ತಡೆದು ವಶಪಡಿಸಿಕೊಂಡ ವಾಹನಗಳನ್ನು ಸೆಂಟನರಿ ಹಾಲ್‍ನಲ್ಲಿ ಇರಿಸಲಾಯಿತು.