Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣ: ಜೈಲಿಗೆ ಹಾಕುವ ಅವಶ್ಯಕತೆಯೇ ಇಲ್ಲ, ಶೂಟೌಟ್ ಮಾಡಲಿ

Pramod Mutalik
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಗಾಯಗೊಂಡ ಕುಟುಂಬವನ್ನು ಹಿಂದೂ ನಾಯಕ ಪ್ರಮೋದ್ ಮುತಾಲಿಕ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. 

ಆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಈ ಘಟನೆಯನ್ನು ನಾನು ಶ್ರೀರಾಮ ಸೇನೆ ವತಿಯಿಂದ ಉಗ್ರವಾಗಿ ಖಂಡಿಸುತ್ತೇನೆ. ಈ ಘಟನೆಯನ್ನು ನೋಡಿದಾಗ ಇನ್ನೂ ಅಂಬೇಡ್ಕರ್ ಅವರ ಕನಸು ನನಸಾಗಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇನ್ನೂ ರಾಜ್ಯದಲ್ಲಿರುವ ಸರ್ಕಾರವೂ ಸರಿಯಾದ ಕಾನೂನು ಕ್ರಮವನ್ನು ಕೈಗೊಂಡಿಲ್ಲ ಎಂದರು.

ದಲಿತ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕೆ ಗಂರ್ಭಿಣಿಯೆಂದು ಯೋಚಿಸದೆ ಹತ್ಯೆ ಮಾಡಿರುವ ಆ ಪಾಪಿ ತಂದೆ, ರಾಕ್ಷಸನಿಗಿಂತನೂ ಕ್ರೂರವಾದವನು. ಇಂತವರನ್ನು ಜೈಲಿಗೆ ಹಾಕುವ ಅವಶ್ಯಕತೆನೇ ಇಲ್ಲ, ಅಲ್ಲೇ ಶೂಟೌಟ್ ಮಾಡಬೇಕೆಂದು ಆಗ್ರಹಿಸಿದರು. 

ಬಸವಣ್ಣನ ತತ್ವಗಳನ್ನು ಪಾಲನೆ ಮಾಡುತ್ತ ಬದುಕುತ್ತಿರುವ ಆ ಕುಟುಂಬ ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಗಾಯಗೊಂಡ ಕುಟುಂಬವನ್ನು ನೋಡುತ್ತಿದ್ದರೆ, ಈ ಘಟನೆಯಿಂದ ಎಲ್ಲರೂ ಭಯಭೀತರಾಗಿದ್ದಾರೆ. 

ದಲಿತ ಸಮುದಾಯದಲ್ಲಿ ಹುಟ್ಟಿದವನು ಹಾಗಾದ್ರೆ ಪ್ರೀತಿನೇ ಮಾಡಬಾರದಾ. ಅವರಿಗೇನು ಹೃದಯವಿಲ್ವ. ಆ ಜಾತಿಯಲ್ಲಿ ಹುಟ್ಟಿದ್ದೆ ಪಾಪನಾ ಎಂದು ಪ್ರಶ್ನೆ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯೂರ್ ಬಸ್ ದುರಂತ: ಸಜೀವ ದಹನವಾದ ಮಗಳ ಮೃತದೇಹದ ಗುರುತು ಹಿಡಿದ ವಿಚಾರ ತಿಳಿದ್ರೆ ಕಣ್ಣೀರು ಬರುತ್ತೆ