Webdunia - Bharat's app for daily news and videos

Install App

ಹುಬ್ಬಳ್ಳಿ ಅಂಜಲಿ ಹತ್ಯೆ ಮಾಡಿದ್ದೇಕೆ ಎಂದು ಬಾಯ್ಬಿಟ್ಟ ಆರೋಪಿ ವಿಶ್ವ

Krishnaveni K
ಬುಧವಾರ, 22 ಮೇ 2024 (14:47 IST)
ಹುಬ್ಬಳ್ಳಿ: ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಪ್ರಕರಣಗಳಲ್ಲಿ ಅಂಜಲಿ ಅಂಬಿಗೇರ ಪ್ರಕರಣವೂ ಒಂದು. ಆರೋಪಿ ವಿಶ್ವನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಕೊಲೆಗೆ ನಿಜ ಕಾರಣವೇನೆಂದು ಬಾಯ್ಬಿಟ್ಟಿದ್ದಾನೆ.

ಮೇ 15 ರಂದು ನಸುಕಿನಲ್ಲಿ ಅಂಜಲಿ ಮನೆಗೆ ನುಗ್ಗಿದ್ದ ಆರೋಪಿ ವಿಶ್ವ ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅಂಜಲಿಯ ತಂಗಿ ಮತ್ತು ಅಜ್ಜಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಅಂಜಲಿ ಕೊಲೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ದಾವಣಗೆರೆಗೆ ತೆರಳುವ ರೈಲಿನಲ್ಲಿ ತಪ್ಪಿಸಿಕೊಂಡು ಹೋಗುವಾಗ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ಸಹ ಪ್ರಯಾಣಿಕರ ದರ್ಮದೇಟಿನಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಹಾರುವಾಗ ಗಾಯ ಮಾಡಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಅಂಜಲಿಯನ್ನು ವಿಶ್ವ ಪ್ರೀತಿಸುತ್ತಿದ್ದ. ಆಕೆಯನ್ನು ಕೊಲೆ ಮಾಡುವ ಮೊದಲು ಮೈಸೂರಿಗೆ ಬರಲು ಕರೆದಿದ್ದ. ಆದರೆ ಆಕೆ ಬರಲೊಪ್ಪಲಿಲ್ಲ ಎಂದು ಕೊಲೆ ಮಾಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಇದೀಗ ಪೊಲೀಸ್ ವಿಚಾರಣೆ  ವೇಳೆ ತಾನೇಕೆ ಅಂಜಲಿಯನ್ನು ಕೊಲೆ ಮಾಡಿದೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ.

ಕೊಲೆ ಮಾಡುವ ಮೊದಲು ಆಕೆಗೆ ಫೋನ್ ಪೇ ಮೂಲಕ 1000 ರೂ. ಖಾತೆಗೆ ಹಾಕಿದ್ದೆ. ಅದನ್ನು ಪಡೆದುಕೊಂಡು ಆಕೆ ನನ್ನ ನಂಬರ್ ಬ್ಲಾಕ್ ಮಾಡಿದ್ದಳು. ನಾನು ಬೆಳಗಿನ ಜಾವ ಆಕೆಯ ಮನೆಗೆ ಹೋಗಿ ಮೈಸೂರಿಗೆ ಹೋಗೋಣ ಬಾ ಎಂದು ಕರೆದೆ. ಆದರೆ ಆಕೆ ಬರಲೊಪ್ಪಲಿಲ್ಲ. ಆಗ ಕೋಪ ಬಂತು. ಅದಕ್ಕೇ ಚಾಕು ಹಾಕಿದೆ ಎಂದು ವಿಶ್ವ ಹೇಳಿಕೊಂಡಿದ್ದಾನೆ.

ಇನ್ನೊಂದೆಡೆ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೆ ಅಲ್ಲಿಯೂ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಆಯಾಗೆ ಧಮ್ಕಿ ಹಾಕಿದ್ದಾನೆ. ಇದರಿಂದ ಸಿ‍ಬ್ಬಂದಿ ಭಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಆತನ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ಭದ್ರತೆ ಹೆಚ್ಚಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments