ಹುಬ್ಬಳ್ಳಿ: ಐದು ವರ್ಷದ ಬಾಲಕಿಯನ್ನು ಆಮಿಷವೊಡ್ಡಿ ಕರೆದೊಯ್ದು ರೇಪ್ ಆಂಡ್ ಮರ್ಡರ್ ಮಾಡಿದ ಕಾಮುಕನನ್ನು ಮಹಿಳಾ ಪಿಎಸ್ಐ ಎನ್ ಕೌಂಟರ್ ಮಾಡಿ ಬಿಸಾಕಿದ್ದು ಜನ ಶಹಬ್ಬಾಶ್ ಎಂದಿದ್ದಾರೆ.
ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರೀ ಸುದ್ದಿ ಮಾಡಿದೆ. ಆಟವಾಡುತ್ತಿದ್ದ ಐದು ವರ್ಷದ ಕಂದಮ್ಮನನ್ನು ಬಿಹಾರ ಮೂಲದ ಕಾರ್ಮಿಕ ಆಮಿಷವೊಡ್ಡಿ ಕರೆದೊಯ್ದಿದ್ದ. ಬಳಿಕ ರೇಪ್ ಮಾಡಿ ಕೊಲೆ ಮಾಡಿದ್ದ. ಬಾಲಕಿಯ ಶವ ಶೌಚಾಲಯವೊಂದರಲ್ಲಿ ಪತ್ತೆಯಾಗಿತ್ತು.
ಘಟನೆ ಬೆನ್ನಲ್ಲೇ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಮುಕನನ್ನು ಹಿಡಿದು ಎನ್ ಕೌಂಟರ್ ಮಾಡಿ, ಇಲ್ಲವೇ ನಮ್ಮ ಕೈಗೊಪ್ಪಿಸಿ ನಾವು ನೋಡಿಕೊಳ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಮೂರು ತಂಡಗಳನ್ನು ರಚಿಸಿ ಕಾಮುಕನ ಪತ್ತೆಗೆ ಬಲೆ ಬೀಸಿದ್ದರು. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈತನ ಜಾಡು ಹಿಡಿದು ಬಂಧಿಸಲು ಹೋದಾಗ ಆರೋಪಿ ರಿತೇಶ್ ಕುಮಾರ್ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಪಿಎಸ್ ಐ ಅನ್ನಪೂರ್ಣ ಮತ್ತು ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಈ ವೇಳೆ ಪಿಎಸ್ ಐ ಅನ್ನಪೂರ್ಣ ಆರೋಪಿಯ ಎದೆಗೇ ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರ ಕೃತ್ಯಕ್ಕೆ ಸಾರ್ವಜನಿಕರು ಶಹಬ್ಬಾಶ್ ಗಿರಿ ನೀಡಿದ್ದಾರೆ.