27 ರಿಂದ 35 ರ ವರೆಗಿನ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ ಜನರು ಸುಲಭವಾಗಿ ತಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಈ ಚಿಕಿತ್ಸಾ ವಿಧಾನ ಸಹಕಾರಿಯಾಗಿದೆ. ಶಸ್ತ್ರಚಿಕಿತ್ಸೆ ಇಲ್ಲದ ವಿಶೇಷ ಎಂಡೋಸ್ಕೋಪಿಕ್ ಯಂತ್ರವನ್ನು ಬಳಸುವ ಮೂಲಕ ಹೊಟ್ಟೆಯ (ಜಠರದ) ಗಾತ್ರವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
ವಿಶ್ವದಾದ್ಯಂತ ಇಂತಹ 2000 ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಿದೆ. ಇದೊಂದು ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸಾ ವಿಧಾನವಾಗಿದ್ದು, ಡೇ ಕೇರ್ ವಿಧಾನವಾಗಿದೆ. ಬೊಜ್ಜಿನಿಂದ ಬಳಲುತ್ತಿರುವ ಎಲ್ಲರಿಗೂ ಒಳ್ಳೆಯ ಚಿಕಿತ್ಸಾ ವಿಧಾನವಾಗಿದೆ.
ಈ ಚಿಕಿತ್ಸಾ ವಿಧಾನದ ಸಂಶೋಧಕ ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಅವರಿಂದ ನಮ್ಮ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರೋಲೈಜಿಸ್ಟ್‌ಗಳು ತರಬೇತಿಯನ್ನು ಪಡೆದುಕೊಂಡಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಚಿಕಿತ್ಸಾ ವಿಧಾನ ನಮ್ಮ ಟ್ರಸ್ಟ್‌ವೆಲ್ ಆಸ್ಪತ್ರೆ ಯಲ್ಲೂ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಟ್ರಸ್ಟ್‌ವೆಲ್ ಹಾಸ್ಪಿಟಲ್ ನ ಸಿಎಂಡಿ ಡಾ. ಹೆಚ್ ವಿ ಮಧುಸೂಧನ್ ಹೇಳಿದರು.
ಪ್ರಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಹಾಗೂ ಇಂದೋರ್ ನ ಡಾ ಮೋಹಿತ್ ಭಂಡಾರಿ ಅವರು ರಾಜ್ಯದ 15 ಜಠರ ಶಾಸ್ತ್ರಜ್ಞ ವೈದ್ಯರುಗಳಿಗೆ ತರಬೇತಿಯನ್ನು ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಶೋಕ್ ಆರ್, ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥರು, ಟ್ರಸ್ಟ್ ವೆಲ್ ಆಸ್ಪತ್ರೆ, ಮೊ: 91 99004 42219