Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಹಣ ವಸೂಲಿಕೋರರನ್ನುತಡೆಯಲಿ ಎಂದೋರಾರು?

ಸಿಎಂ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಾಂಡವವಾಡುತ್ತಿದೆ. ನೆರೆ ಸಂತ್ರಸ್ಥರ ನೆರವಿನ ನೆಪದಲ್ಲಿ ಹಣ ಕೊಳ್ಳೆ ಹೊಡೆಯುತ್ತಿರೋರನ್ನ ಸಿಎಂ ತಡೆಯಲಿ. ಹೀಗಂತ ಮಾಜಿ ಸಚಿವ ಹಾಲಿ ಶಾಸಕ ಆಗ್ರಹ ಮಾಡಿದ್ದಾರೆ.

ಡಬ್ಬಾ ಹಿಡಿದು ಹಣ ವಸೂಲಿ ಮಾಡುತ್ತಿರೋದು ನಡೆಯುತ್ತಿದೆ. ಅದರತ್ತ ಬಿ.ಎಸ್.ಯಡಿಯೂರಪ್ಪನವರು ಗಮನ ಹರಿಸಲಿ. ಹೀಗಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

webdunia
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೆರೆ ಪೀಡಿತರ ನೆಪ ಮಾಡಿಕೊಂಡು ಡಬ್ಬಿ ಹಿಡಿದು ಕೆಲವರು ವಸೂಲಿಗೆ ತೊಡಗಿಕೊಂಡಿದ್ದಾರೆ. ಅಂಥವರನ್ನು ಸಿಎಂ ತಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಡಿಕೆಶಿ, ದೇಶದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೇ ಧ್ವಜಾರೋಹಣ ನಡೆಸಲಾಗುತ್ತಿರೋದು ವಿಷಾದನೀಯ. ಬಿಜೆಪಿಯವರು ಯಾವಾಗ ಸಂಪುಟ ರಚನೆ ಮಾಡ್ತಾರೋ ನೋಡಬೇಕು ಅಂತಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಆಗ್ತೀನಿ ಅಂತ ನೀಚ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ