Webdunia - Bharat's app for daily news and videos

Install App

ನೀರು ತಂದುಕೊಟ್ಟ ವೃದ್ಧ ಮಹಿಳೆಗೆ ಬಾಗಿಲು ಮುಚ್ಚಿ ಪ್ರಜ್ವಲ್ ರೇವಣ್ಣ ಏನೆಲ್ಲಾ ಮಾಡಿದ್ದರು ಇಲ್ಲಿದೆ ವಿವರ

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (14:30 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ದೋಷಾರೋಪ ಪಟ್ಟಿಯಲ್ಲಿ 60 ರ ವೃದ್ಧೆ ಮೇಲೆ ಪ್ರಜ್ವಲ್ ಯಾವ ರೀತಿಯಲ್ಲಿ ಎರಗಿದ್ದ ಎನ್ನುವುದು ಬಹಿರಂಗವಾಗಿದೆ.

ಹೊಳೆನರಸೀಪುರದ ತೋಟದ ಮನೆಯಲ್ಲಿ ಸಂತ್ರಸ್ತೆ ಮೇಲೆ ಮೊದಲ ಬಾರಿಗೆ ರೇಪ್ ನಡೆದಿತ್ತು. 2021 ರಲ್ಲಿ ಕೊವಿಡ್ ಲಾಕ್ ಡೌನ್ ಗೆ ಮೊದಲು ಈ ಕೃತ್ಯ ನಡೆದಿತ್ತು. ತೋಟದ ಮನೆಗೆ ಒಂದು ದಿನ ಮಧ್ಯಾಹ್ನ ಬಂದಿದ್ದ ಪ್ರಜ್ವಲ್ ರೇವಣ್ಣ ಅಲ್ಲೇ ಮನೆ ಕ್ಲೀನ್ ಮಾಡುತ್ತಿದ್ದ ಸಂತ್ರಸ್ತ ಮಹಿಳೆಯನ್ನು ಕರೆದು ಏನು ಕ್ಲೀನ್ ಆಯ್ತಾ ಎಂದು ಕೇಳಿದ್ದಾರೆ. ಬಳಿಕ ಒಂದು ಲೋಟ ನೀರು ತಂದುಕೊಡುವಂತೆ ಹೇಳಿ ರೂಮಿಗೆ ಹೋಗಿದ್ದಾರೆ.

ಸಂತ್ರಸ್ತ ವೃದ್ಧ ಮಹಿಳೆ ರೂಂಗೆ ಬಂದಾಗ ಬಾಗಿಲು ಭದ್ರಪಡಿಸಿಕೊಂಡ ಪ್ರಜ್ವಲ್ ನಿನ್ನ ಬಟ್ಟೆ ಬಿಚ್ಚು ಎಂದು ಬೆದರಿಸಿದ್ದಾರೆ. ಅದಕ್ಕೆ ಬೇಡ ಬಿಡಣ್ಣಾ.. ಭಯ ಆಯ್ತದೆ ಎಂದಿದ್ದಾರೆ. ಆದರೂ ಕೇಳದೇ ಬೆದರಿಸಿ ಆಕೆಯ ಬಟ್ಟೆ ಬಿಚ್ಚಿಸಿ ವಿಡಿಯೋ, ಫೋಟೋ ತೆಗೆದುಕೊಂಡಿದ್ದಾರೆ. ಆ ಮಹಿಳೆ ಬಾತ್ ರೂಂಗೆ ಹೋಗಬೇಕು, ಅರ್ಜೆಂಟ್ ಎಂದರೂ ಕೇಳದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಇದನ್ನು ವಿಡಿಯೋ ಮಾಡಿಕೊಂಡಿದ್ದ ಪ್ರಜ್ವಲ್ ಈ ವಿಚಾರವನ್ನು ಯಾರಿಗಾರೂ ಹೇಳಿದರೆ ಈ ವಿಡಿಯೋವನ್ನು ಮಗನಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದಾರೆ. ನಿನ್ನ ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಆಕೆ ಯಾರ ಬಳಿಯೂ ಇದನ್ನು ಬಾಯ್ಬಿಟ್ಟಿರಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ