Publish Date: Tue, 04 Sep 2018 (18:40 IST)
Updated Date: Tue, 04 Sep 2018 (18:43 IST)
ಭಕ್ತರ ಆರಾಧ್ಯ ದೈವವಾಗಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ಬೃಹತ್ ಮೊತ್ತದ ದೇಣಿಗೆ ನೀಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಿಂದ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ 1.1 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಈ ಹಣವನ್ನು ಬಳಕೆ ಮಾಡಲಿದೆ ಎಂದು ಕಂಪನಿ ಹೇಳಿದೆ. ದೇವಸ್ಥಾನದ ಅಧಿಕಾರಿಗೆ ಕಂಪನಿಯ ಅಧಿಕಾರಿಯೊಬ್ಬರು 1.1 ಕೋಟಿ ಮೌಲ್ಯದ ಡಿಡಿ ನೀಡಿದ್ದಾರೆ.
ಆರ್ ಐ ಎಲ್ ನೀಡಿರುವ 1.1 ಕೋಟಿ ರೂಪಾಯಿಯನ್ನು ಟ್ರಸ್ಟ್ ಆಸ್ಪತ್ರೆಗೆ ಬಳಸಿಕೊಂಡು ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಿದೆ.