ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹನಿಟ್ರ್ಯಾಪ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ತಮ್ಮನ್ನು ಹನಿಟ್ರ್ಯಾಪ್ ಮಾಡಲು ಬಂದವರನ್ನು ಸಚಿವ ಕೆಎನ್ ರಾಜಣ್ಣ ಹಿಡಿದು ಹಾಕಿದ್ದು ಹೇಗೆ? ಇಲ್ಲಿದೆ ವಿವರ.
ನಿನ್ನೆಯಿಡೀ ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಹನಿಟ್ರ್ಯಾಪ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸುವ ಲಕ್ಷಣ ಕಾಣುತ್ತಿದೆ. ಸಹಕಾರ ಸಚಿವ ಕೆಎನ್ ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದಾರೆ.
ಹನಿಟ್ರ್ಯಾಪ್ ಮಾಡುವ ಉದ್ದೇಶದಿಂದ ರಾಜಣ್ಣ ಅವರ ಸರ್ಕಾರೀ ನಿವಾಸಕ್ಕೆ ಎರಡು ಬಾರಿ ಗ್ಯಾಂಗ್ ಹೋಗಿತ್ತು. ಎರಡನೇ ಬಾರಿ ಹೋದಾಗ ಹನಿಟ್ರ್ಯಾಪ್ ಗ್ಯಾಂಗ್ ಸಿಕ್ಕಿಬಿದ್ದಿದೆ. ಎರಡನೇ ಬಾರಿ ಅದೇ ಗ್ಯಾಂಗ್ ಬಂದಾಗ ಸಂಶಯಗೊಂಡ ರಾಜಣ್ಣ ಏನು, ಎತ್ತ ಎಂದು ವಿಚಾರಣೆ ನಡೆಸಿದ್ದಾರೆ. ನಿಮ್ಮನ್ನು ಕಳುಹಿಸಿದ್ದು ಯಾರು ಎಂದು ಅಮೂಲಾಗ್ರವಾಗಿ ವಿಚಾರಿಸಿದ್ದಾರೆ.
ಆಗ ಅವರು ತಮ್ಮನ್ನು ಕಳುಹಿಸಿದ್ದು ಯಾರು, ಕೃತ್ಯ ನಡೆಸಲು ಹೇಳಿದವರು ಯಾರು ಎಂಬ ಎಲ್ಲಾ ವಿವರ ಹೇಳಿದ್ದಾರಂತೆ. ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಮಾತ್ರವಲ್ಲ ವಿಪಕ್ಷದವರು, ಕೇಂದ್ರ ನಾಯಕರೂ ಇದ್ದಾರೆ. ಇದರ ಬಗ್ಗೆ ಗಂಭೀರ ಕ್ರಮವಾಗಲೇಬೇಕು ಎಂದು ರಾಜಣ್ಣ ಹೇಳಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಹೈಕಮಾಂಡ್ ಗೂ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ.