Publish Date: Fri, 06 Dec 2019 (19:23 IST)
Updated Date: Fri, 06 Dec 2019 (19:26 IST)
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಚಿವರೊಬ್ಬರು ಐಶ್ವರ್ಯಾ ರೈ ಕುರಿತು ನೀಡಿರೋ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಈ ಕುರಿತು ಮಾತನಾಡೋ ವೇಳೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿವಾದ ಸೃಷ್ಟಿ ಮಾಡಿದ್ದಾರೆ.
ಹೆಚ್ಚುವರಿಯಾಗಿ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಜಿಸಲಾಗುತ್ತದಾ ಅಂತೆಲ್ಲ ಪರ್ತಕರ್ತರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಗರಂ ಆದ ಕೆ.ಎಸ್.ಈಶ್ವರಪ್ಪ, ಅದೇನೋ ಹೇಳ್ತಾರಲ್ಲ, ವಯಸ್ಸಿಗೆ ಬಂದ ಎಲ್ಲರಿಗೂ ಐಶ್ವರ್ಯಾ ರೈ ಬೇಕು ಎಂದು ಕೇಳುತ್ತಾರೆ.
ಒಬ್ಬಳೇ ಐಶ್ವರ್ಯಾ ರೈ ಇದ್ದಾಳೆ. ಹಾಗೇನೂ ಆಗೋದಿಲ್ಲ ಅಂತ ಈಶ್ವರಪ್ಪ ಹೇಳೋ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.