ಚಂದ್ರಯಾನ-3ರ ಪ್ರಗ್ಯಾನ್ ರೋವರ್ ಈಗಾಗಲೇ ಚಂದ್ರನ ಮೇಲೆ ಸಲ್ಫರ್ ಮತ್ತು ಆಮ್ಲಜನಕ ಸೇರಿದಂತೆ ಹಲವಾರು ಧಾತುಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ನಿನ್ನೆ, ಪ್ರಗ್ಯಾನ್ ರೋವರ್‌ನ ಮತ್ತೊಂದು ಉಪಕರಣವು ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕವನ್ನು ಕಂಡು ಕೊಂಡಿದೆ ಎಂದು ಇಸ್ರೋ ದೃಢಪಡಿಸಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಯಶಸ್ವಿಯಾಗಿ ಬಂದಿಳಿದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಲ್ಫರ್ ಪತ್ತೆಯಾದ ನಂತರ ಅದು ಹೇಗೆ ಬಂತು ಎಂಬುದರ ಬಗ್ಗೆ ವಿಜ್ಞಾನಿಗಳು ಚಿಂತನೆ ನಡೆಸುತ್ತಿದ್ದಾರೆ. ಹೀಗೆ ಸಲ್ಫರ್ ಅಥವಾ ಗಂಧಕ ಇರಬೇಕಾದರೆ ಅಲ್ಲಿ ಅವು ತನ್ನಿಂದತಾನೇ ಉದ್ಭವವಾಗಿದೆಯೇ, ಜ್ವಾಲಾಮುಖಿಯೇ ಅಥವಾ ಉಲ್ಕಾಶಿಲೆಯೇ ಎಂಬುದರ ಬಗ್ಗೆ ವಿಜ್ಞಾನಿಗಳು ಮತ್ತಚ್ಟು ಶೋಧಕಾರ್ಯವನ್ನು ನಡೆಸುತ್ತಿದ್ದಾರೆ.