Select Your Language

Notifications

webdunia
webdunia
webdunia
webdunia

ಬಿಎಸ್ ಯಡಿಯೂರಪ್ಪನವರ ಪತ್ನಿ ಸಾವು ಯಾಕೆ ಸುದ್ದಿಯಾಗಿದೆ, ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಏನಿತ್ತು

BS Yediyurappa

Krishnaveni K

ಬೆಂಗಳೂರು , ಮಂಗಳವಾರ, 22 ಅಕ್ಟೋಬರ್ 2024 (09:17 IST)
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಸಾವಿಗೆ ಶೋಭಾ ಕರಂದ್ಲಾಜೆ ಕಾರಣ ಎಂದು ಸಚಿವ ಭೈರತಿ ಸುರೇಶ್ ಗಂಭೀರ ಆರೋಪ ಹೊರಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದರೊಂದಿಗೆ ಬಿಎಸ್ ಯಡಿಯೂರಪ್ಪನವರ ಪತ್ನಿ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈತ್ರಾ ದೇವಿ ಮೃತಪಟ್ಟಿದ್ದು 2004 ರಲ್ಲಿ. ಶಿವಮೊಗ್ಗದ ಮನೆಯಲ್ಲಿ ಮೈತ್ರಾ ದೇವಿ ಮೃತದೇಹ ನೀರಿನ ಸಂಪ್ ನಲ್ಲಿ ಕಂಡುಬಂದಿತ್ತು. ಆಗ ಯಡಿಯೂರಪ್ಪನವರು ಇನ್ನೂ ಮುಖ್ಯಮಂತ್ರಿಯಾಗಿರಲಿಲ್ಲ. ವಿಪಕ್ಷ ನಾಯಕರಾಗಿದ್ದರು.

ಇದರ ವಿಚಾರಣೆಗಳೂ ನಡೆದಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಇದು ನೀರಿನ ಸಂಪ್ ಗೆ ಬಿದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿ ಬಂತು. ಪೊಲೀಸರು ಇದು ಸಹಜ ಸಾವೆಂದು ಕೇಸ್ ಕ್ಲೋಸ್ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರನ್ನು ಆಗಾಗ ಪತ್ನಿಯ ಸಾವಿನ ವಿಚಾರವಾಗಿ ಕೆಣಕುತ್ತಲೇ ಇರುತ್ತಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಈ ಸಾವಿನ ಪ್ರಕರಣ ಸದ್ದು ಮಾಡಿತ್ತು 2009 ರಲ್ಲಿ ಸ್ಥಳೀಯ ವಕೀಲ ಕೆ ಶೇಷಾದ್ರಿ ಎಂಬವರು ಇದು ಆಕಸ್ಮಿಕ ಸಾವಲ್ಲ ಎಂದು ಸಂಶಯಿಸಿ ಕೋರ್ಟ್ ಗೆ ಮರು ತನಿಖೆ ಮಾಡಲು ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ಯಡಿಯೂರಪ್ಪನವರ ಜೊತೆಗೆ ಅವರ ಪುತ್ರರಾದ ಬಿವೈ ವಿಜಯೇಂದ್ರ, ರಾಘವೇಂದ್ರ, ಪುತ್ರಿ ಅರುಣಾ ದೇವಿ ಹಾಗೂ ಮೂವರು ನೌಕರರನ್ನೂ ಆರೋಪಿಯನ್ನಾಗಿ ಮಾಡಲಾಗಿತ್ತು. ಆಗ ಕೋರ್ಟ್ ಮತ್ತೆ ಮರು ವಿಚಾರಣೆಗೆ ಆದೇಶ ನೀಡಿತ್ತು.

ಪ್ರತೀ ಬಾರಿ ತನಿಖೆಯಾದಾಗಲೂ ಇದು ಸಹಜ ಸಾವೆಂದೇ ಕಂಡುಬಂದಿದೆ. ಹಾಗಿದ್ದರೂ ರಾಜಕೀಯ ಎದುರಾಳಿಗಳಿಗೆ ಯಡಿಯೂರಪ್ಪ ವಿರುದ್ಧ ಇದೊಂದು ಅಸ್ತ್ರವೇ ಆಗಿತ್ತು. ಈಗಲೂ ಅದು ಮುಂದುವರಿದಿದೆ. ಇದೀಗ ಮತ್ತೆ ಭೈರತಿ ಸುರೇಶ್ ಆ ಸಾವಿನ ಪ್ರಕರಣವನ್ನು ಎತ್ತಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಮೈತ್ರಾ ದೇವಿ ಸಾವಿನ ಪ್ರಕರಣ ಸದ್ದು ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಪ್ರಗತಿ ಎಂದ ಸಿಎಂ ಸಿದ್ದರಾಮಯ್ಯಗೆ ಮೊದಲು ಬೆಂಗಳೂರು ರಸ್ತೆ ಗುಂಡಿ ಮುಚ್ಚಿ ಎಂದ ಜನ