ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

ಶನಿವಾರ, 9 ಡಿಸೆಂಬರ್ 2017 (20:26 IST)
ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಡೆದಿದೆ.
 
ಮಾರುತಿ ಬಡಾವಣೆಯ ಜ್ಯೋತಿ (29) ಅವರು ಕೊಲೆಯಾಗಿರುವ ಗೃಹಿಣಿಯಾಗಿದ್ದು, ಇವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆರೋಪಿ ಪ್ರವೀಣ ಜೊತೆ ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
 
ಪ್ರವೀಣ ಮನೆಗೆ ಹೋಗಿ ಜ್ಯೋತಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಆರೋಪಿ ಜ್ಯೋತಿ ಮನೆಗೆ ನುಗ್ಗಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ.
 
ಹುಣಸೂರು ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ. ಗೃಹಿಣಿಯನ್ನು ಕೊಲೆಗೈದ ನಂತರ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಂದೆಗೆ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿ ಮನವೊಲಿಸಿದ್ದಾನೆ ಎಂದು ಹೇಳಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಮೇಶಕತ್ತಿ ಅವರ ಜೊತೆ ರಾಜಕೀಯದ ಬಗ್ಗೆ ಚರ್ಚಿಸಿಲ್ಲ- ಸಿಎಂ