ವೃದ್ದೆಯ ಚಿನ್ನದ ಸರ ಕಳವು ಮಾಡಿದ್ದ ಆಸ್ಪತ್ರೆಯ ಲ್ಯಾಬ್ ಸಹಾಯಕ

Webdunia
ಭಾನುವಾರ, 12 ಡಿಸೆಂಬರ್ 2021 (20:52 IST)
ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದ ವೃದ್ದೆಯ ಚಿನ್ನದ ಸರ ಕಳವು ಆಸ್ಪತ್ರೆಯ ಲ್ಯಾಬ್ ಸಹಾಯಕನನ್ನು ಬ್ಯಾಡರಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಖಾಸಗಿ ಆಸ್ಪತ್ರೆಯೊಂದರ ಲ್ಯಾಬ್ ಸಹಾಯಕ ಇಮ್ತಿಯಾಜ್ (22) ಬಂಧಿತ. ಆರೋಪಿಯಿಂದ 70 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ಪ್ರಕಟಿಸಿದ್ದಾರೆ.
ಬ್ಯಾಡರಹಳ್ಳಿ ಲಕ್ಷಮ್ಮ ಅವರು ಕೋವಿಡ್‌ಗೆ ತುತ್ತಾಗಿ ಏಪ್ರಿಲ್ 22 ರಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಮಸ್ಯೆ ಇದ್ದ ಕಾರಣ ಐಸಿನಲ್ಲಿ ಚಿಕಿತ್ಸೆ ನೀಡಲಾಯಿತು. ಅದೇ ಆಸ್ಪತ್ರೆಯ ಐಸಿ ವಾರ್ಡ್‌ನಲ್ಲಿ ಇಮ್ತಿಯಾಜ್ ಲ್ಯಾಬ್ ಸಹಾಯಕನಾಗಿ ಕೆಸಲ ಮಾಡುತ್ತಿದ್ದಾರೆ. ಈ ವೇಳೆ ರೋಗಿಯ ಕೊರಳಿನಲ್ಲಿ ಮೂರು ಲಕ್ಷ ಮೌಲ್ಯದ 70 ಗ್ರಾಂ ಮಾಂಗಲ್ಯ ಸರವನ್ನು ಗಮನಿಸಿದ್ದ ಇಮ್ತಿಯಾಜ್, ವೃದ್ಧೆಯ ಅರಿವಿಗೆ ಬಾರದ ಹಾಗೆ ಆ ಸರವನ್ನು ಕಳವು ಮಾಡಿದೆ. ಮೂರು ದಿನಗಳ ನಂತರ ತನ್ನ ತಾಯಿಯನ್ನು ನೋಡಲು ಬಂದ ವೃದ್ಧೆಯ ಪುತ್ರಿಯ ಕೊರಳಲ್ಲಿ ಮಾಂಗಲ್ಯ ಸರವಿಲ್ಲದಿರುವುದನ್ನು ಗಮನಿಸಿ, ಆಸ್ಪತ್ರೆಯ ಸಿಬ್ಬಂದಿ ಕೇಳಿದ್ದಾರೆ. ಇದಕ್ಕೆ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ, ಕೂಡಲೇ ಬ್ಯಾಡರಹಳ್ಳಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಅನುಮಾನದ ಆಸ್ಪತ್ರೆ ಸಿಬ್ಬಂದಿಗಳು, ಇಮ್ತಿಯಾಜ್‌ನನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೆÇಲೀಸರು ಪ್ರಕಟಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತೀಶ್ ಜತೆಗೆ ನಡೆದ ಮಾತುಕತೆ ಬಗ್ಗೆ ಬಿಚ್ಚಿಟ್ಟ ಡಿಕೆ ಶಿವಕುಮಾರ್‌

ವಾಚ್ ವಿಚಾರದಲ್ಲಿ ಡಿಕೆಶಿಗೆ ಬೇಸರವಾದರೆ ನಾನೇನೂ ಮಾಡಲಾಗದು: ಛಲವಾದಿ ನಾರಾಯಣಸ್ವಾಮಿ

ಶಿಕ್ಷಣದ ಪ್ರತಿ ಹಂತದಲ್ಲೂ ಭಗವದ್ಗೀತೆ ಅಳವಡಿಸಬೇಕು: ಕುಮಾರಸ್ವಾಮಿ

ನಿಮ್ಮ ಬಾಯಿ ತೆವಲಿಗೆ ಮನಸ್ಸಿಗೆ ಬಂದಂತೆ ಮಾತನಾಡಬೇಡಿ: ನಾರಾಯಣ ಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತ್ತೆ ಟ್ರ್ಯಾಕ್‌ಗೆ ಜಿಗಿದ ವ್ಯಕ್ತಿ

ಮುಂದಿನ ಸುದ್ದಿ
Show comments