Select Your Language

Notifications

webdunia
webdunia
webdunia
webdunia

ಕಬ್ಬನ್​​​ ಪಾರ್ಕ್​​​ ಬಳಿ ಹಾರ್ನ್​​ ನಿಷೇಧ

Horn ban near Cubbon Park
bangalore , ಶನಿವಾರ, 12 ನವೆಂಬರ್ 2022 (17:02 IST)
ಬೆಂಗಳೂರು ನಗರದಲ್ಲಿರುವ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನ ಸಂಚಾರ ಮಾಡುವವರು ಇನ್ನು ಮುಂದೆ ಎಚ್ಚರಿಕೆ ವಹಿಸಲೇಬೇಕು. ಕಬ್ಬನ್ ಪಾರ್ಕ್‍ನಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿಯಾಗಿದ್ದು, ಅಪ್ಪಿ, ತಪ್ಪಿ ಈ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಕಟ್ಟಬೇಕಾಗಿದೆ. ಇನ್ಮುಂದೆ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನ ಓಡಿಸುವಾಗ ಹಾರ್ನ್ ಮಾಡುವಂತಿಲ್ಲ. ಕಾರಣ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ನೋಡಲೆಂದೇ ಲಕ್ಷಾಂತರ ಮಂದಿ ಬಂದು ಹೋಗ್ತಾರೆ. ಇದರ ನಡುವೆ ಬೆಂಗಳೂರು ಮಂದಿ ಕೂಡ ಇದರ ನಡುವೆ ಓಡಾಟ ಮಾಡ್ತಾರೆ. ಈ ವೇಳೆ ವಾಹನಗಳು ಉಂಟು ಮಾಡುವ ಹಾರ್ನ್‍ನಿಂದಾಗಿ ಬರುವ ಜನರಿಗೆ ತೊಂದರೆ ಉಂಟುಮಾಡಿದೆ. ಕಬ್ಬನ್ ಪಾರ್ಕ್ ಒಳ ಭಾಗದಲ್ಲಿ ಶಬ್ಧ ಉಂಟು ಮಾಡಿ ಸಾರ್ವಜನಿಕರಿಗೆ ಹಾಗೂ ಪಕ್ಷಿ, ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರ ಸಂಚಾರಿ ಪೊಲೀಸರ ಜೊತೆ ಸಭೆ ನಡೆಸಿ ತೋಟಗಾರಿಕೆ ಇಲಾಖೆ ಹೊಸದೊಂದು ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಮತ್ತು ಕುಕ್ಕೆಗೆ ಭೇಟಿ ನೀಡಿದ ತಮಿಳು ನಟ ವಿಶಾಲ್