Webdunia - Bharat's app for daily news and videos

Install App

ಮಹಾನಗರದಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡ

Webdunia
ಗುರುವಾರ, 4 ನವೆಂಬರ್ 2021 (21:55 IST)
ಬೆಂಗಳೂರು: ಮಹಾನಗರದಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವನ್ನು ನಂದಿನಿ ಲೇಔಟ್​​ ಪೊಲೀಸರು ಬಂಧಿಸಿದ್ದಾರೆ. ಓರ್ವ ಯುವತಿ ಸೇರಿ ಮುತ್ತು, ಪೆದ್ದರೆಡ್ಡಿ, ದಾಮೋದರ್​​ ಬಂಧಿತ ಆರೋಪಿಗಳು.
ಶಿವರುದ್ರಯ್ಯ ಎಂಬ ನಿವೃತ್ತ ಪ್ರಾಂಶುಪಾಲರು ಬಾರ್​ ಲೈಸೆನ್ಸ್​ ಪಡೆದುಕೊಳ್ಳಲು ಹುಡುಕಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ಹನಿಟ್ರ್ಯಾಪ್​ ಗ್ಯಾಂಗ್​ನ ಯುವತಿ ಪರಿಚಯವಾಗಿತ್ತು. ತನ್ನ ಪರಿಚಯದವರ ಬಳಿ ಬಾರ್​ ಲೈಸೆನ್ಸ್ ಇದೆ ಎಂದೇಳಿ ಸ್ನೇಹ ಬೆಳಸಿ ಪ್ಲಾನ್​ ರೂಪಿಸಿದ್ದರು. ಬಳಿಕ ಬಾರ್​ ಲೈಸೆನ್ಸ್​​ ವಿಚಾರವಾಗಿ ಮಾತುಕತೆ ನಡೆಸಲು ಯುವತಿ ಶಿವರುದ್ರಯ್ಯರನ್ನು ಮನೆಗೆ ಕರೆಸಿಕೊಂಡಿದ್ದಳು. ಯುವತಿ ಜೊತೆ ಮಾತಾಡುತ್ತಿದ್ದಾಗ ಗ್ಯಾಂಗ್​ನಲ್ಲಿದ್ದ ಇನ್ನಿತರ ಆರೋಪಿಗಳು ಮನೆ ಒಳಗೆ ನುಗ್ಗಿದ್ದರು. ಈ ವೇಳೆ ನಕಲಿ ಪ್ರೆಸ್ ಕಾರ್ಡ್ ತೋರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟು ಪ್ರಾಂಶುಪಾಲರಿಂದ ಆರೋಪಿಗಳು 3 ಲಕ್ಷ ರೂ. ಹಣ ಪಡೆದಿದ್ದಾರೆ. ನಂತರ ಉಳಿದ ಹಣಕ್ಕಾಗಿ ಗ್ಯಾಂಗ್ ಒತ್ತಾಯಿಸಿತ್ತು.
ಇದರಿಂದ ಬೇಸತ್ತ ಶಿವರುದ್ರಯ್ಯ ನಂದಿನಿ ಲೇಔಟ್​​ ಪೊಲೀಸ್​​ ಠಾಣೆಯಲ್ಲಿ ಹನಿ ಟ್ರ್ಯಾಪ್ ಮಾಡಿರುವುದಾಗಿ​ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಖಾಕಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments