Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಬಲೆಗೆ ಬಿದ್ದ ಹನಿಟ್ರ್ಯಾಪ್ ಗ್ಯಾಂಗ್!

mandya
bengaluru , ಮಂಗಳವಾರ, 27 ಜುಲೈ 2021 (17:17 IST)

ಹೊರಗೆ ಜಾಲಿಯಾಗಿ ಸುತ್ತಾಡಿಕೊಂಡು ಬ

ರೋಣ ಬಾ ಎಂದು ಯುವಕನನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯುವಕರಿಗೆ ಮಹಿಯನ್ನು ಪರಿಚಯಿಸಿ ನಂತರ ಸಲುಗೆ ಬೆಳೆಯುವಂತೆ ಮಾಡಿ ದೋಚುತ್ತಿದ್ದ ಮಂಡ್ಯದ ರವಿಚಂದ್ರ, ಕಾರ್ತಿಕ್, ಕಿರಣ್ ಹಾಗೂ ಚನ್ನಪಟ್ಟಣ ಮೂಲದ ಮಂಜು ಬಂಧಿತರು

ಇತ್ತೀಚೆಗೆ ಕಾರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬ ಯುವಕನನ್ನ ಪರಿಚಯ ಮಾಡಿಕೊಂಡು ವಾಟ್ಸಾಪ್ ಚಾಟ್ ಮಾಡುತ್ತಿದ್ದ ಮಹಿಳೆ, ಜುಲೈ 22ರ ರಾತ್ರಿ ಹೊರಗೆ ಸುತ್ತಾಡೋಣ ಬಾ ಎಂದು ಕೊತ್ತತ್ತಿ ಗ್ರಾಮದ ಜ್ವಾಲಾಮುಖಿ ದೇವಾಲಯ ಬಳಿ ಕರೆಸಿಕೊಂಡಿದ್ದಾಳೆ.

ಗಿರೀಶ್ ದೇವಾಲಯ ಬಳಿ ಬರುತ್ತಿದ್ದಂತೆ ಅಪರಿಚಿತರಂತೆ ಬಂದ ನಾಲ್ವರು ಹಲ್ಲೆ ನಡೆಸಿ ಗಿರೀಶ್ ಮೇಲೆ ಹಲ್ಲೆ ನಡೆಸಿ 30 ಸಾವಿರ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದರು. ಹಲ್ಲೆ ಬಳಿಕ ದರೋಡೆಕೋರರ ಜೊತೆ ಮಹಿಳೆ ಪರಾರಿಯಾಗಿದ್ದಲು.

ಗಿರೀಶ್ ನೀಡಿದ ದೂರು ಆಧರಿಸಿ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಮಹಿಳೆ ನಾಪತ್ತೆಯಾಗಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯಾರಾಗ್ತಾರೋ ಯಾರಿಗೆ ಗೊತ್ತು: ಎಚ್.ಡಿ. ಕುಮಾರಸ್ವಾಮಿ