Publish Date: Thu, 27 Dec 2018 (16:29 IST)
Updated Date: Thu, 27 Dec 2018 (16:31 IST)
ಮಿನಿ ವಿಧಾನಸೌಧದಲ್ಲಿ ಜೇನು ಹುಳುಗಳು ದಾಳಿ ನಡೆಸಿ ಮೂವರಿಗೆ ಗಾಯಗೊಳಿಸಿರುವ ಘಟನೆ ನಡೆದಿದೆ.
ಹೆಚ್.ಡಿ.ಕೋಟೆಯ ಆರ್.ಟಿ.ಸಿ.ಈ ಸ್ವತ್ತು ಪಡೆಯಲು ಮಿನಿ ವಿಧಾನಸೌಧಕ್ಕೆ ಬಂದಿದ್ದ ಮೂವರಿಗೆ ಜೇನು ಹುಳು ದಾಳಿ ಮಾಡಿ ಗಾಯಗೊಳಿಸಿವೆ.
ಹೆಚ್.ಡಿ.ಕೋಟೆ ಮಿನಿ ವಿಧಾನಸೌಧದಲ್ಲಿ ಈ ಘಟನೆ ನಡೆದಿದೆ.
ಮಿನಿ ವಿಧಾನಸೌಧ ಕಛೇರಿಯಲ್ಲಿ ಹತ್ತಕ್ಕೂ ಹೆಚ್ಚು ಜೇನು ಹುಳಗಳು ಗೂಡು ಕಟ್ಟಿವೆ. ಗಾಯಗೊಂಡವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಾಯ ಆಗುವ ಮುನ್ನ ತಹಸೀಲ್ದಾರ್ ರು ಜೇನು ಗೂಡು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.