Webdunia - Bharat's app for daily news and videos

Install App

ಪ್ರಾಮಾಣಿಕತೆ ಉದಾಹರಣೆ ಈ ಆಟೊ ಚಾಲಕ

Webdunia
ಸೋಮವಾರ, 12 ಸೆಪ್ಟಂಬರ್ 2022 (17:08 IST)
ಆಟೋಚಾಲಕರೊಬ್ಬರು 2.20 ಲಕ್ಷ ರೂ. ಬೆಲೆಯ ಆಭರಣಗಳನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ. ಮಲ್ನಾಡ್ ಆಟೋ ನಿಲ್ದಾಣದ ಚಾಲಕ ಮೊಹಮ್ಮದ್ ಗೌಸ್ ಅವರ ಆಟೋದಲ್ಲಿ ಶನಿವಾರ ಟಿಪ್ಪುನಗರಕ್ಕೆ ಹೋಗಿದ್ದ ಶಿಕಾರಿಪುರ ತಾಲ್ಲೂಕಿನ ಚಿಕ್ಕಕಬ್ಬಾರ್ ಗ್ರಾಮದ ಶೆಹತಾಜ್ ಬಾನು, ಆಟೋ ಸೀಟ್ ಹಿಂಭಾಗದಲ್ಲಿ ಕೆಲವು ಬ್ಯಾಗ್ ಇರಿಸಿದ್ದರು.
ಟಿಪ್ಪುನಗರದಲ್ಲಿ ಇಳಿದ ಅವರು ಬೇರೆಲ್ಲಾ ವಸ್ತುಗಳನ್ನು ತೆಗೆದುಕೊಂಡು, ಒಡವೆ ಇದ್ದ ಬ್ಯಾಗ್ ಅಲ್ಲೇ ಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಆಭರಣದ ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾಗಿ ತಕ್ಷಣವೇ ಅವರು ಆಟೋ ಚಾಲಕನಿಗಾಗಿ ಹುಡುಕಾಡಿ ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 
ಆಟೋ ಚಾಲಕ ಮೊಹಮ್ಮದ್ ಗೌಸ್ ಭಾನುವಾರವಿಡೀ ಬಾಡಿಗೆ ಮಾಡಿದ್ದಾರೆ. ಆಟೋದಲ್ಲಿದ್ದ ಬ್ಯಾಗ್ ಅನ್ನು ಅವರೂ ಗಮನಿಸಿಲ್ಲ. ಸೋಮವಾರ ಬೆಳಗ್ಗೆ ಆಟೋ ತೊಳೆಯಲು ಹೋದಾಗ ಅವರ ಗಮನಕ್ಕೆ ಬಂದು ಅದರಲ್ಲಿದ್ದ ವಿಳಾಸ ಗಮನಿಸಿ ಟಿಪ್ಪುನಗರದಲ್ಲಿ ಹುಡುಕಾಡಿದ್ದಾರೆ.
 
ಬಳಿಕ ಆಭರಣ ಕಳೆದುಕೊಂಡ ಮಹಿಳೆ ಸಿಕ್ಕಿದ್ದು, ಅವರದೇ ಆಭರಣ ಎಂದು ಖಚಿತಪಡಿಸಿಕೊಂಡ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ 2.20 ಲಕ್ಷ ರೂ. ಮೌಲ್ಯದ ಆಭರಣ ವಾರಸುದಾರರಿಗೆ ಮರಳಿಸಿದ್ದಾರೆ. ಆಟೋಚಾಲಕ ಮೊಹಮ್ಮದ್ ಗೌಸ್ ಅವರ ಪ್ರಾಮಾಣಿಕತೆಗೆ ಪ್ರಶಂಸಾ ಪತ್ರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments