Select Your Language

Notifications

webdunia
webdunia
webdunia
webdunia

ಉಕ್ರೇನ್‌ನಿಂದ ಮನೆ ತಲುಪಿದ ವಿದ್ಯಾರ್ಥಿಗಳು

ಉಕ್ರೇನ್‌ನಿಂದ ಮನೆ ತಲುಪಿದ ವಿದ್ಯಾರ್ಥಿಗಳು
bangalore , ಭಾನುವಾರ, 27 ಫೆಬ್ರವರಿ 2022 (18:36 IST)
ಉಕ್ರೇನ್- ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಇನ್ನೂ ಪೂರ್ವ ಯೂರೋಪಿಯನ್ ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು, ಸುರಕ್ಷಿತವಾಗಿ ಮನೆ ತಲುಪುವುದನ್ನು ಎದುರು ನೋಡುತ್ತಿದ್ದಾರೆ.
2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮನು ಡಿ.ಎಸ್ ಅವರು ಚೆನ್‌ವಿಸಿ ಎಂಬಲ್ಲಿನ ಬುಕೊವಿನಾ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದರು. ಜತೆಗೆ ಸುದೀಪ್ ಪಾಟೀಲ್ ಕೂಡಾ ದಾವಣಗೆರೆ ಜಿಲ್ಲೆಯವರಾಗಿದ್ದು, ಇಬ್ಬರೂ ಮನೆ ತಲುಪಿದ್ದಾರೆ. ಚೆರ್ನ್‌ವಿಸಿಯಿಂದ ಕೀವ್ ವರೆಗೆ ರೈಲಿನಲ್ಲಿ ಬಂದು ಬಳಿಕ ಭಾರತಕ್ಕೆ ವಾಪಸ್ಸಾಗಿದ್ದಾಗಿ ಅವರು ಹೇಳಿದ್ದಾರೆ.
ಉಕ್ರೇನ್ ರಾಜಧಾನಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದಾಗಿ ಅವರು ವಿವರಿಸಿದ್ದಾರೆ. "ನಮ್ಮ ವಿವಿ ಪೂರ್ವ ಉಕ್ರೇನ್‌ನಲ್ಲಿ ಇದ್ದ ಕಾರಣದಿಂದ ಉದಯ ಯುದ್ಧ ಪ್ರದೇಶದಿಂದ ದೂರದ ಸ್ಥಳ. ಆದ್ದರಿಂದ ಸುರಕ್ಷಿತವಾಗಿ ಕೀವ್‌ಗೆ ತಲುಪಲು ಸಾಧ್ಯವಾಯಿತು" ಎಂದು ಮನು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಇತರ ಮೂವರು ವಿದ್ಯಾರ್ಥಿಗಳಾದ ಸಯೀದಾ ಹಬೀಬಾ, ಹಬೀದ್ ಅಲಿ ಮತ್ತು ಪ್ರಿಯಾ ಭಾರತಕ್ಕೆ ಆಗಮಿಸುವ ಮಾರ್ಗಮಧ್ಯದಲ್ಲಿದ್ದಾರೆ ಎನ್ನಲಾಗಿದೆ. "ಕೀವ್ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಅವರು ಬಸ್ಸಿನಲ್ಲಿ ನೆರೆಯ ರೊಮಾನಿಯಾಗೆ ಆಗಮಿಸಿದ್ದಾರೆ. ರೊಮಾನಿಯಾದಿಂದ ಮುಂಬೈಗೆ ಬರುವ ವಿಮಾನದಲ್ಲಿ ಆಗಮಿಸುತ್ತಿರುವುದಾಗಿ ಮನು ಹೇಳಿದ್ದಾರೆ.
ವಿಜಾಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇರುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ. ಈ ಪೈಕಿ ಸ್ನೇಹಾ ಪಾಟೀಲ್ ಎಂಬ ವಿದ್ಯಾರ್ಥಿನಿ ದೆಹಲಿಗೆ ಬಂದಿರುವುದಾಗಿ ವರದಿಯಾಗಿದೆ. ಉಕ್ರೇನ್‌ನಿಂದ ವಿಮಾನ ದರವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರು ದೂರಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲೇ ಉಳಿಯುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದಿಂದ ಉಕ್ರೇನ್ ಆಕ್ರಮಣ: ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರವುಳಿದ ಭಾರತ