ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿರೋ ಶಿವರಾತ್ರಿಗೆ ಈ ಬಾರಿಯೂ ರಜೆ ಇದೆ. ಹಬ್ಬಕ್ಕೂ ಮೊದಲೇ ಸಿದ್ಧತೆಗಳು ಭರದಿಂದ ಸಾಗಿವೆ.
ಶಿವರಾತ್ರಿ ಹಬ್ಬವನ್ನು
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಫೆ. 21 ರಂದು ಶಿವರಾತ್ರಿ ಹಬ್ಬ ಇದೆ.
ಆ ದಿನ
ಉಪವಾಸ,
ಜಾಗರಣೆಗಳನ್ನು ಮಾಡಿ,
ಶಿವ ಪೂಜೆಯನ್ನು ಮಾಡುವ ಮೂಲಕ ಹಬ್ಬ ಆಚರಿಸಲಾಗುತ್ತದೆ.
ಶಿವರಾತ್ರಿ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ.
ಶಿವನ ದೇವಾಲಯಗಳಲ್ಲಿ ಈಗಿನಿಂದಲೇ ಸಿದ್ಧತೆಗಳು ಶುರುವಾಗಿವೆ. ಪ್ರಮುಖ ದೇವಸ್ಥಾನಗಳಲ್ಲಿ ಬಣ್ಣ, ವಿಶೇಷ ಪೂಜೆಗೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ.