ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

Krishnaveni K
ಶನಿವಾರ, 28 ಜೂನ್ 2025 (17:09 IST)
ಬೆಂಗಳೂರು: ಆರ್ ಎಸ್ ಎಸ್ ನ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ವಿಚಾರವಾಗಿ ಮಾತನಾಡಿರುವುದನ್ನು ನಾವು ಖಂಡಿಸುತ್ತೇವೆ. ಈ ವಿಚಾರವಾಗಿ ಹೋರಾಟ ನಡೆಸಲು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದೇವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ಎಂ ರೇವಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆರ್ ಎಸ್ ಎಸ್ ಅವರ ಚಿಂತನೆ ಕುತಂತ್ರ ಏನು ಎಂದು ಹಳ್ಳಿ, ಹಳ್ಳಿಗೂ ತಲುಪಿಸುವ ಕೆಲಸವನ್ನು ಮಾಡಲಾಗುವುದು. ಆರ್‌ ಎಸ್ ಎಸ್ ನ ಈ ಹೇಳಿಕೆಯನ್ನು ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳ ಮುಖಂಡರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಒಪ್ಪುತ್ತಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

 ‘ಈ ಆರ್ ಎಸ್ ಎಸ್ ಅವರು ಎಂದಿಗೂ ಸಂವಿಧಾನವನ್ನು ಒಪ್ಪಿದವರಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇರುವಂತಹ ಜನರಿವರು. ಆರ್ ಎಸ್ ಎಸ್ ಅವರು ಯಾವಾಗಲೂ ಸಂವಿಧಾನ ವಿರೋಧಿಗಳಾಗಿಯೇ ನಡೆದುಕೊಂಡು ಬಂದವರು. ಅವರಿಗೆ ಯಾವಗೆಲ್ಲಾ ಹಿನ್ನಡೆ ಉಂಟಾಗುತ್ತದೋ ಅಂತಹ ಸಮಯದಲ್ಲಿ ಸಂವಿಧಾನದ ಬಗ್ಗೆ ಮಾತನಾಡುವುದು ಅವರ ಚಾಳಿ.

1952 ರಿಂದಲೂ ಇವರು ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಉದ್ರೇಕಗೊಳಿಸುವ ಕೆಲಸ ಮಾಡುತ್ತಲೇ ಇದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಗ್ಗಟ್ಟನ್ನು ಒಡೆಯುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ.

ಇವರಿಗೆ ದೇಶ ಒಗ್ಗಟ್ಟಾಗಿ ಇರಬೇಕೆ ಬೇಡವೇ? ಮತ್ತೆ ಮನುಸ್ಮೃತಿಯನ್ನು ಹೇರುವ ಕೆಲಸ ಮಾಡುವುದೇ ಕೆಲಸವೇ ಎಂಬುದಾಗಿ ಪ್ರಶ್ನಿಸಬೇಕು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments