Select Your Language

Notifications

webdunia
webdunia
webdunia
webdunia

ದೇಗುಲಗಳ ಹಣ ಮಸೀದಿಗೆ ವರ್ಗವಾಗಲ್ಲ: ಬೋರ್ಡ್ ಹಾಕಿ ಭಕ್ತರ ಸೆಳೆಯಲು ಸರ್ಕಾರದ ತಂತ್ರ

Ramalinga Reddy

Krishnaveni K

ಬೆಂಗಳೂರು , ಮಂಗಳವಾರ, 12 ನವೆಂಬರ್ 2024 (08:57 IST)
ಬೆಂಗಳೂರು: ಹಿಂದೂ ದೇವಾಲಯಗಳ ಹಣ ಬೇರೆ ಧರ್ಮದ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಈಗ ಸರ್ಕಾರವೇ ಸ್ಪಷ್ಟನೆ ಕೊಡಲು ಮುಂದಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯದ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸುವ ಬದಲು ಮಸೀದಿ, ಚರ್ಚ್, ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳಿತ್ತು. ಇದರಿಂದಾಗಿ ದೇವಾಲಯಗಳಿಗೆ ಬರುವ ಭಕ್ತರು ಹುಂಡಿಗೆ ದುಡ್ಡು ಹಾಕಲೂ ಹಿಂದು ಮುಂದು ನೋಡುವಂತಾಗಿತ್ತು.

ನಾವು ದೇವರಿಗೆಂದು ಹಾಕುವ ಹಣ ದೇವರ ಸೇವೆಗೇ ಬಳಕೆಯಾಗುತ್ತದೆ ಎಂಬುದು ಏನು ಗ್ಯಾರಂಟಿ ಎನ್ನುವುದು ಭಕ್ತರ ಪ್ರಶ್ನೆಯಾಗಿತ್ತು. ದೇವರ ಹುಂಡಿಗೆ ಹಣ ಹಾಕುವ ಬದಲು ನೀವೇ ಬಡವರಿಗೆ ಹಣ ದಾನ ಮಾಡಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದವು.

ಈ ಹಿನ್ನಲೆಯಲ್ಲಿ ಈಗ ಸರ್ಕಾರವೇ ದೇವಾಲಯದ ಹಣ ದೇವಾಲಯಗಳ ಅಭಿವೃದ್ಧಿಗಷ್ಟೇ ಬಳಕೆಯಾಗುತ್ತದೆ ಎಂದು ಎಲ್ಲಾ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ಫಲಕ ಹಾಕಿ ಭಕ್ತರ ವಿಶ್ವಾಸ ಗಳಿಸಲು ಮುಂದಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 36,000 ದೇವಾಲಯಗಳಿವೆ. ಈ ಎಲ್ಲಾ ದೇವಾಲಯಗಳಲ್ಲಿ ಇಂತಹದ್ದೊಂದು ಫಲಕ ಹಾಕಲು ಸ್ವತಃ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಫಲಿತಾಂಶ ಬಂದ ಮೇಲೆ ಬಿವೈ ವಿಜಯೇಂದ್ರಗೆ ಕೊಕ್