Select Your Language

Notifications

webdunia
webdunia
webdunia
webdunia

ಹಿಂದೂ ಕಾರ್ಯಕರ್ತನ ಕೊಲೆ– ಮಂಗಳೂರು ಉದ್ವಿಗ್ನ

ಹಿಂದೂ ಕಾರ್ಯಕರ್ತನ ಕೊಲೆ– ಮಂಗಳೂರು ಉದ್ವಿಗ್ನ
ಮಂಗಳೂರು , ಬುಧವಾರ, 3 ಜನವರಿ 2018 (21:13 IST)
ಮಂಗಳೂರುಹಿಂದೂಪರ ಸಂಘಟನೆಯ ಕಾರ್ಯಕರ್ತನನ್ನು ಕಾರಿನಲ್ಲಿ ಬೆನ್ನುಹತ್ತಿಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಲಾಗಿದ್ದು, ಘಟನೆಯಿಂದ ಮಂಗಳೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
 
ಕಾಟಿಪಾಳ್ಳದಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು, ಕಾಟಿಪಳ್ಳ ಕೈಕಂಬ ನಿವಾಸಿ ದೀಪಕ್ (32) ಕೊಲೆಯಾಗಿದ್ದಾನೆ. ಸಿಮ್ ವಿತರಕನಾಗಿರುವ ದೀಪಕ್ ಬಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ. ಈಗ ಬಿಜೆಪಿಯ ಉತ್ತರ ವಿಧಾನಸಭಾ ಕ್ಷೇತ್ರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. 
 
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಫೈರಿಂಗ್ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ವೇಳೆ ಓರ್ವ ಆರೋಪಿ ಕಾಲಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ.
 
ಕಾಟಿಪಳ್ಳ, ಸುರತ್ಕಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆಯಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ಅಭ್ಯರ್ಥಿ ವಿಚಾರದಲ್ಲಿ ಡಿಕೆಶಿ ಸಹೋದರರ ನಡುವೆ ಕದನ