ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡ ಕುಸಿತದಿಂದ 10ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಗದ್ದೆ ಸಂಪೂರ್ಣ ಮಣ್ಣುಪಾಲಾಗಿದೆ. ಗುಡ್ಡದ ಮಣ್ಣು ಗದ್ದೆ, ತೋಟದಲ್ಲಿ ಕೊಚ್ಚಿಕೊಂಡು ಹೋಗಿದೆ. ಕುಸಿತದಿಂದಾಗಿ ಕೃಷಿ ಭೂಮಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.ಹೀಗೆ ಮಳೆ ಮುಂದುವರಿದರೆ ಜಿಲ್ಲೆಯಲ್ಲಿ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆ ಇದೆ. ಕಳೆದ 3 ವರ್ಷದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಈ ಹಿಂದೆ ತೀರ್ಥಹಳ್ಳಿಯ ಹೆಗಲತ್ತಿ, ಸಾಗರದ ಆರೋಡಿ ಬಳಿ ಸಹ ಗುಡ್ಡ ಕುಸಿತ ಉಂಟಾಗಿತ್ತು.