ಕೊಪ್ಪಳ : ಕರ್ನಾಟಕದಲ್ಲಿ ಹಿಜಬ್- ಕೇಸರಿ ಶಾಲು ಸಂಘರ್ಷದ ನಡುವೆ ಕೊಪ್ಪಳ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಶಾಲೆಗೆ ಹಾಜರಾಗಿದ್ದಾರೆ.
ನಗರದ ಮೌಲಾನಾ ಅಜಾದ್ ಮಾದರಿಯ ಶಾಲೆಯಲ್ಲಿ ನಿನ್ನೆ ಶಾಲೆಗೆ ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಬಿಚ್ಚಿಸಿ ಶಾಲೆಗೆ ಪ್ರವೇಶ ನೀಡಿದ್ದರು.
ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿನಿಯರು ಕ್ಯಾರೇ ಅನ್ನದೇ ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ನಾವು ಹಿಜಬ್ ತೆಗೆಯುವುದಿಲ್ಲ ಎಂದು ಕೈಯಲ್ಲಿ ಸನ್ನೆ ಮಾಡುತ್ತಾ ಪಟ್ಟು ಹಿಡಿದಿದ್ದಾರೆ.
ಇನ್ನೂ ಇದೇ ಕಾರಣಕ್ಕೆ ಶಾಲೆಯ ಮುಂದೆ ಜಮಾಯಿಸಿರುವ ಪಾಲಕರು ಹಿಜಬ್ ವಿವಾದ ಮುಗಿಯುವವರೆಗೂ ಶಾಲೆಗೆ ರಜೆ ಘೊಷಣೆ ಮಾಡುವಂತೆ ಆಗ್ರಹಿಸಿದ್ದಾರೆ.