Publish Date: Tue, 28 Jun 2022 (20:28 IST)
Updated Date: Tue, 28 Jun 2022 (20:32 IST)
2021-22ನೇ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್ಟಿಸಿ ನಿಗಮವು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ. ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ವರೆಗೂ ನಡೆಯಲಿದೆ. ಆದರೆ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಅವಧಿ ಏಪ್ರಿಲ್ ತಿಂಗಳಿಗೆ ಕೊನೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಕಾಲೇಜು ಅಡ್ಮಿಷನ್ ರಶೀದಿ, ಹಳೇ ಪಾಸ್ ತೋರಿಸಿ ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆ ಹೊರಡಿಸಿದೆ.