Select Your Language

Notifications

webdunia
webdunia
webdunia
webdunia

ಸಚಿವ ಅರಗ ಜ್ಞಾನೇಂದ್ರಗೆ ಹೈಕಮಾಂಡ್‌ ಬುಲಾವ್‌; ಸಚಿವ ಸ್ಥಾನಕ್ಕೆ ಕುತ್ತು?

ಸಚಿವ ಅರಗ ಜ್ಞಾನೇಂದ್ರಗೆ ಹೈಕಮಾಂಡ್‌ ಬುಲಾವ್‌; ಸಚಿವ ಸ್ಥಾನಕ್ಕೆ ಕುತ್ತು?
bengaluru , ಗುರುವಾರ, 12 ಮೇ 2022 (14:43 IST)
ದೆಹಲಿಗೆ ಕೂಡಲೇ ಆಗಮಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಹೈಕಮಾಂಡ್‌ ಸೂಚಿಸಿದೆ. ಇದರಿಂದ ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ಕಂಟಕ ಶುರುವಾಗಿದೆಯೇ ಎಂಬ ಅನುಮಾನ ಉಂಟಾಗಿದೆ.
ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ಎಡವಟ್ಟು ಮಾಡುತ್ತಿರುವ ಆರಗ ಜ್ಞಾನೇಂದ್ರ ಬಗ್ಗೆ ವಿಪಕ್ಷಗಳು ಮಾತ್ರವಲ್ಲ ಸ್ವಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಸೂಕ್ಷ್ಮ ವಿಷಯಗಳ ನಿರ್ವಹಣೆಯಲ್ಲಿ ಒಂದು ಕಡೆ ಎಡವಟ್ಟು ಮಾಡುತ್ತಿದ್ದರೆ ಮತ್ತೊಂದೆಡೆ ಎಡವಟ್ಟು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ.
ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿದ್ದ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ ಬೆನ್ನಲ್ಲೇ ಈ ಆರಗ ಜ್ಞಾನೇಂದ್ರ ಅವರಿಗೆ ಬುಲಾವ್‌ ಮಾಡಿರುವುದು ಕುತೂಹಲ ಮೂಡಿಸಿದ್ದು, ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ಕಂಟಕ ಎದುರಾಗುವುದೇ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಪಡೆದಿಲ್ಲವೆಂದು ಮಗ ಸೊಸೆ ವಿರುದ್ಧ ಕೇಸ್ ದಾಖಲು!?