Select Your Language

Notifications

webdunia
webdunia
webdunia
webdunia

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದವರ ಅನುಭವ ಹಂಚಿಕೊಳ್ಳಲು ಇಲ್ಲಿದೆ “ಆಶಾ ವೇದಿಕೆ”

Here is to share the experience of those who have undergone knee surgery “Asha Forum
bangalore , ಶುಕ್ರವಾರ, 22 ಅಕ್ಟೋಬರ್ 2021 (18:40 IST)
ಬೆಂಗಳೂರು: ಮೊಣಕಾಲು ಶಸ್ತçಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ರೋಗಿಗಳ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಫೋರ್ಟಿಸ್ ಆಸ್ಪತ್ರೆ ವತಿಯಿಂದ “ಆಶಾ” ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
 
ಮೊಣಕಾಲು ಶಸ್ತ್ರಚಿಕಿತ್ಸೆಗೂ ಮೊದಲು ಆ ನಂತರದ ಜೀವನದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಚಾಲನೆ ನೀಡಿ ಮಾತನಾಡಿದ ಆರ್ಥೋಪೆಡಿಕ್ಸ್ ವಿಭಾಗದ ಡಾ. ನಾರಾಯಣ್ ಹಲ್ಸ್, ವಯಸ್ಸಾದ ಬಳಿಕ ಅತಿ ಮೊಣಕಾಲು ನೋವು ಸಾಮಾನ್ಯ. ಆದರೆ, ಈ ನೋವು ಹೆಚ್ಚಾದರೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕು. ಇಂಥ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ತಮ್ಮ ನೋವು ರಹಿತ ಜೀವನ ನಡೆಸುವುದು ಅತ್ಯಂತ ಸಂತಸ ನೀಡುತ್ತದೆ. ಅದರ ಅನುಭವ ಹಂಚಿಕೊಳ್ಳಲು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದವರು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ನೀಡಿದೆ ಎಂದರು.
hospital

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ “ಚಿಣ್ಣರ ಧಾಮ” ನಿರ್ಮಿಸುತ್ತಿರುವ ಬೆಂಗಳೂರು ವಿಮಾನ ನಿಲ್ದಾಣ ಫೌಂಡೇಷನ್!