ಮಡಿಕೇರಿ : ಕನ್ನಡ ನಾಡಿನ ಜೀವನದಿ ತಲಕಾವೇರಿ ಪವಿತ್ರ ತೀರ್ಥವನ್ನು ಪಡೆಯಲು ರಾಜ್ಯ, ದೇಶದ ನಾನಾ ಭಾಗಗಳಿಂದ ಬರುವ ಭಕ್ತರಿಗೆ ಇದೀಗ ದೇವಾಲಯ ಅಡಳಿತ ಮಂಡಳಿ ಗುಡ್ ನ್ಯೂಸ್ ನೀಡಿದೆ.
ಇನ್ಮುಂದೆ ಕಾವೇರಿ ಭಕ್ತರು ಕಾವೇರಿ ತೀರ್ಥ ಪ್ರಸಾದವನ್ನು ಮನೆಯಲ್ಲೇ ಕುಳಿತು ಪಡೆಯಲು ಅವಕಾಶ ಕಲ್ಪಿಸಿದೆ. ಕರ್ನಾಟಕ, ತಮಿಳುನಾಡು ರೈತರ ಪಾಲಿನ ವರದಾತೆ ಕಾವೇರಿ ಮಾತೆಗೆ ನಮಿಸಲು ಪ್ರತಿನಿತ್ಯ ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಅಗಮಿಸುವ ಭಕ್ತರು ಹಲವು ದಿನಗಳಿಂದ ಬೇಡಿಕೆಯೊಂದನ್ನು ಸಲ್ಲಿಸಿದ್ದರು.
ಕಾವೇರಿ ಮಾತೆ ತೀರ್ಥ ಪ್ರಸಾದವನ್ನು ತಮ್ಮ ಮನೆಯಲ್ಲೇ ಸಿಕ್ಕುವಂತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದೀಗ ತಲಕಾವೇರಿ ಹಾಗೂ ಭಗಂಡೇಶ್ವರ ದೇವಾಲಯ ಅಡಳಿತ ಮಂಡಳಿ ಕಾವೇರಿ ಭಕ್ತರಿಗೆ ತೀರ್ಥ ಪ್ರಸಾದವನ್ನು ಅನ್ಲೈನ್ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸಲು ನಿರ್ಧಾರ ಮಾಡಿದೆ.
ಇನ್ಮುಂದೆ ಕಾವೇರಿ ಭಕ್ತರು ಮನೆಯಲ್ಲೇ ಕುಳಿತು ತಿತಿತಿ.iಟಿಜiಚಿಠಿosಣ.gov.iಟಿ ವೆಬ್ಸೈಟ್ಗೆ ಭೇಟಿ ನೀಡಿ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಸತೀಶ ಪ್ರಸಾದದ ಬೇಡಿಕೆ ಬಗ್ಗೆ ಮಾಹಿತಿ ನೀಡಿದರು.