Select Your Language

Notifications

webdunia
webdunia
webdunia
webdunia

ಅಂಗಡಿಯಿಂದ ತುಪ್ಪ ತಂದು ತಿನ್ನುವಾಗ ಹುಷಾರ್: 5 ಸ್ಯಾಂಪಲ್ ಗಳಲ್ಲಿ ಅಪಾಯಕಾರಿ ಅಂಶ ಪತ್ತೆ

Ghee

Krishnaveni K

ಬೆಂಗಳೂರು , ಶನಿವಾರ, 26 ಅಕ್ಟೋಬರ್ 2024 (09:49 IST)
ಬೆಂಗಳೂರು: ಆರೋಗ್ಯಕ್ಕೆ ಒಳ್ಳೆಯದು ಎಂದು ಮಾರುಕಟ್ಟೆಯಲ್ಲಿ ಸಿಗುವ ಯಾವುದೋ ತುಪ್ಪ ತಂದು ತಿನ್ನುವ ಮೊದಲು ಹುಷಾರು. ಇದೀಗ ಪರೀಕ್ಷೆಗೊಳಪಡಿಸಲಾದ 5 ತುಪ್ಪದ ಸ್ಯಾಂಪಲ್ ಗಳಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇತ್ತೀಚೆಗೆ ತಿರುಪತಿಯಲ್ಲಿ ಪ್ರಸಾದ ಲಡ್ಡಿಗೆ ಕಲಬೆರಕೆ ತುಪ್ಪ ಬಳಕೆಯಾದ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಜ್ಯದಲ್ಲೂ ಆರೋಗ್ಯ ಇಲಾಖೆ ತುಪ್ಪದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿತ್ತು. ಒಟಟು 230 ಸ್ಯಾಂಪಲ್ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 224 ಸ್ಯಾಂಪಲ್ ಗಳು ಸುರಕ್ಷಿತ ಎಂದು ತಿಳಿದುಬಂದಿದೆ.

ಆದರೆ ಐದು ಸ್ಯಾಂಪಲ್ ಗಳಲ್ಲಿ ಸೇವನೆಗೆ ಯೋಗ್ಯವಲ್ಲ ಅಪಾಯಕಾರಿ ಅಂಶವಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇನ್ನೊಂದು ಸ್ಯಾಂಪಲ್ ಅತ್ಯಂತ ಕಳಪೆ ಮಟ್ಟದ್ದು ಎಂದು ಕಂಡುಬಂದಿದೆಯಂತೆ. ಈ ವಿಚಾರವನ್ನು ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಕಲಬೆರಕೆ ಆಹಾರ ಪತ್ತೆಗೆ ಮ್ಯಾಜಿಕ್ ಬಾಕ್ಸ್ ಅಳವಡಿಕೆ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು ಅಪಾಯಕಾರಿ ತುಪ್ಪದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಯಾವುದೇ ಹಿಂದೆ-ಮುಂದೆ ಗೊತ್ತಿಲ್ಲದ ತುಪ್ಪ ಮನೆಗೆ ತಂದು ಚಪ್ಪರಿಸಿಕೊಂಡು ತಿನ್ನುವ ಮೊದಲು ಹುಷಾರಾಗಿರುವುದು ಉತ್ತಮ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮನ ಫ್ಯಾನ್: ಸಿ.ಎಂ.ಸಿದ್ದರಾಮಯ್ಯ