Publish Date: Sun, 07 May 2023 (13:51 IST)
Updated Date: Sun, 07 May 2023 (15:08 IST)
ಕಲಬುರಗಿ : ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ ಆಫೀಸರ್ ಅಣ್ಣಾಮಲೈ, ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ ಎಂದು ಹೇಳುತ್ತಾರೆ.
ಇದೇ ಮಣಿಕಂಠ ಈ ಹಿಂದೆ ನವೆಂಬರ್ನಲ್ಲಿ ನನಗೆ ಶೂಟ್ ಮಾಡುತ್ತೇನೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತನಾಡಿದರೆ ರಾಮರಾಜ್ಯ ಕಟ್ಟುತ್ತೇವೆ ಎಂದು ಹೇಳುತ್ತಾರೆ. ರಾಮರಾಜ್ಯವನ್ನು ರೌಡಿಗಳ ಜೊತೆ ಕಟ್ಟುತ್ತೀರಾ ಹೇಗೆ? ಬಿಜೆಪಿಯವರು ಎಂತಹವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಯೋಚನೆ ಮಾಡಲಿ.
ರವಿ ಕುಮಾರ್ಗೆ ವಿಶ್ವನಾಥ್ ಪಾಟೀಲ್ ಅವರ ಕಾಲು ಧೂಳಿನಷ್ಟೂ ಅನುಭವ ಇಲ್ಲ. ವಿಶ್ವನಾಥ್ ಪಾಟೀಲ್ ಅವರನ್ನು ಖರೀದಿ ಮಾಡುತ್ತೇವೆ ಎಂದು ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರೀದಿ ಆಗುತ್ತಾರೆ ಎಂದು ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ರವಿಕುಮಾರ್ ಗ್ರಾಮ ಪಂಚಾಯತ್ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಇಡೀ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ ತಂದು ವೈಯಕ್ತಿಕವಾಗಿ ಜಗಳ ತಂದಿಡಲು ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈತಪ್ಪಿದರೆ ಮುಜುಗರ ಆಗುತ್ತದೆ ಎಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.