Webdunia - Bharat's app for daily news and videos

Install App

ಆತನಿಗೆ ಅಂಟುರೋಗವಿದೆ; ಹಾಸಿಗೆ ಸುಖ ನೀಡಲೇ?

Webdunia
ಗುರುವಾರ, 28 ಮಾರ್ಚ್ 2019 (20:15 IST)
ಪ್ರಶ್ನೆ: ನನ್ನ ಪ್ರಿಯತಮ ನಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಹಲವು ಬಾರಿ ಯಾರಿಗೂ ಗೊತ್ತಾಗದಂತೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ, ಆತನಿಗೆ ಈಗ ಅಂಟುರೋಗದ ಲಕ್ಷಣಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಆತನೊಂದಿಗೆ ಸಂಭೋಗ ಮಾಡಬಹುದೇ? ದಯವಿಟ್ಟು ತಿಳಿಸಿ.

ಉತ್ತರ: ಕಾಮಾ ತುರಾನಾಂ ನ ಭಯಂ ನ ಲಜ್ಜಾ ಎನ್ನುವ ಮಾತಿದೆ. ಪುರುಷ ಹಾಗೂ ಸ್ತ್ರೀಯರು ಲೈಂಗಿಕ ಆಕರ್ಷಣೆಗೆ ಒಳಗಾದಾಗ ಯಾವುದನ್ನೂ ಲೆಕ್ಕಿಸುವುದಿಲ್ಲ. ಇನ್ನು ಪ್ರೀತಿ, ಪ್ರೇಮದಲ್ಲಿ ಬಿದ್ದಾಗ ಅವರ ಪ್ರಿಯತಮ, ಪ್ರೇಯಸಿಯೇ ಅವರಿಗೆ ಸರ್ವಸ್ವ ಆಗಿರುತ್ತಾರೆ. ಆದರೆ ಸರ್ವಸ್ವ ಎನ್ನುತ್ತಿದ್ದವರೇ ನರಕಕ್ಕೆ ದಾರಿ ತೋರಬಲ್ಲರು.

ನೀವು ನಿಮ್ಮ ಪ್ರೀತಿ ವಿಷಯವನ್ನು ಮಾತ್ರ ಹೇಳಿದ್ದೀರಿ. ಆದರೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇರಲಿ, ನೀವು ಆತನೊಂದಿಗೆ ಮದುವೆಗೂ ಮುಂಚೆ ಸಂಬಂಧ ಬೆಳೆಸಿದ್ದು ಸರಿಯಲ್ಲ. ಆದರೂ ಈಗ ಅಂಟು ರೋಗ ನಿಮ್ಮ ಪ್ರಿಯಕರನಿಗೆ ಇದ್ದರೆ ಆತನಿಂದ ನೀವು ಲೈಂಗಿಕವಾಗಿ ದೂರ ಉಳಿಯುವುದೇ ಕ್ಷೇಮ. ಏಕೆಂದರೆ ರಕ್ತಪಿತ್ತ ರೋಗಿಯಾದ ಪುರುಷರೊಡನೆ ಸ್ತ್ರೀಯರು ಸೇರಬಾರದು ಎಂದು ಹಿರಿಯರೇ ಹೇಳಿದ್ದಾರೆ.

ಅಂಟುರೋಗಿಯ ಜತೆಗೆ ಸಂಭೋಗ ನಡೆಸುವುದು ಹಾನಿಕಾರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲು ನಿಮ್ಮ ಪ್ರಿಯಕರನಿಗೆ ವೈದ್ಯರಲ್ಲಿ ತೋರಿಸಿ ಉತ್ತಮ ಚಿಕಿತ್ಸೆ ಕೊಡಿಸಿ. ಅವನು ಗುಣವಾದ ಮೇಲೆ ನಿಮ್ಮಿಷ್ಟದಂತೆ ಮಾಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ವಿಮಾನ ದುರಂತ: ಮೃತ ನಾಲ್ವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಇವರೇ

ಕೇರಳದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ, ರೆಡ್‌ ಅಲರ್ಟ್ ಘೋಷಣೆ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ರಾಜ್ಯಕ್ಕೆ ಅನುದಾನ ಬೇಕಿದ್ದರೆ ಸಿಎಂ ಅವರೇ ಪ್ರಧಾನಿ ಜೊತೆ ಮಾತನಾಡಲಿ: ನಿಖಿಲ್ ಕುಮಾರಸ್ವಾಮಿ

Air India AirCrash: ಇನ್ಮುಂದೆ ವಿಮಾನ ಸಂಖ್ಯೆ 171 ಬಳಸದಿರಲು ನಿರ್ಧಾರ

ಮುಂದಿನ ಸುದ್ದಿ