Select Your Language

Notifications

webdunia
webdunia
webdunia
webdunia

ಬಿಜೆಪಿ ಹೈಕಮಾಂಡ್​ ಭೇಟಿಯಾಗಲಿರುವ HDK

ಬಿಜೆಪಿ ಹೈಕಮಾಂಡ್​ ಭೇಟಿಯಾಗಲಿರುವ HDK
bangalore , ಬುಧವಾರ, 20 ಸೆಪ್ಟಂಬರ್ 2023 (19:25 IST)
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ.. ಮೈತ್ರಿ ಪಕ್ಕಾ ಎಂದು ಹೇಳಲಾಗ್ತಿದ್ದು, ಸೀಟು ಹಂಚಿಕೆ ಇನ್ನೂ ಚರ್ಚೆಯಾಗಿಲ್ಲ.. ಇದೀಗ ಜೆಡಿಎಸ್​​​ ಶಾಸಕಾಂಗ ಪಕ್ಷದ ನಾಯಕ H.D.ಕುಮಾರಸ್ವಾಮಿ ನಾಳೆ ದೆಹಲಿಗೆ ತೆರಳುತ್ತಿದ್ದು, ಬಿಜೆಪಿ ಹೈಕಮಾಂಡ್​​ ಜೊತೆ ಚರ್ಚೆ ನಡೆಸಲಿದ್ದಾರೆ. ಸೀಟು ಹಂಚಿಕೆ ಲೆಕ್ಕಾಚಾರದ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ.. 5ರಿಂದ 6 ಲೋಕಸಭೆ ಸ್ಥಾನ ‌ಸಿಗುವ ನೀರಿಕ್ಷೆಯಲ್ಲಿ JDS ಪಕ್ಷ ಇದೆ.. 3 ಸ್ಥಾನ ಬಿಟ್ಟುಕೊಟ್ಟರೆ ಸಾಕು ಎಂದು ಬಿಜೆಪಿ ಕೇಳ್ತಿದೆ ಎನ್ನಲಾಗಿದೆ.. ಹೀಗಾಗಿ ಅಂತಿಮ ಲೆಕ್ಕಾಚಾರ ಹಾಕಲು‌ ನಾಳೆ ಸಭೆ ನಡೆಸಲಿದ್ದಾರೆ.. ಮೈತ್ರಿ ಸಮನ್ವಯದ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಮೈತ್ರಿ ಧರ್ಮ ಪಾಲಿಸಲು ಸಮನ್ವಯ ಸಮತಿ ರಚನೆ ಮಾಡಲಾಗುತ್ತದೆ.. ಈ ಮೂಲಕ ಕಮಲ-ದಳದ ನಡುವೆ ಹೊಂದಾಣಿಕೆ ಕೊರತೆ ಬರದಂತೆ ನೋಡಿಕೊಳ್ಳಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾರಕಕ್ಕೇರುತ್ತಾ 3 ಡಿಸಿಎಂ ಕೋಲ್ಡ್​ ವಾರ್​?