Select Your Language

Notifications

webdunia
webdunia
webdunia
webdunia

HDK ಅವರು ಅನಗತ್ಯ ಟೀಕೆ ಮಾಡುವುದು ಬೇಡ

unnecessary criticism
bangalore , ಶನಿವಾರ, 5 ಆಗಸ್ಟ್ 2023 (19:03 IST)
ಇನ್ಸ್‌ಪೆಕ್ಟರ್‌ ವರ್ಗಾವಣೆ ವಿಚಾರವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಅನಗತ್ಯ ಟೀಕೆ ಮಾಡುವುದು ಬೇಡ
ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು,ಸರ್ಕಾರ ನಡೆಸುವವರು ನಾವು, ಯಾವುದು ಸರಿ ಕಾಣುತ್ತೋ ಅದನ್ನು ಮಾಡುತ್ತೇವೆ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನೇ ಗೃಹ ಸಚಿವನಾಗಿದ್ದೆ. ಆಗ ವರ್ಗಾವಣೆ ಬಗ್ಗೆ ಅವರು ಯಾವ ರೀತಿ ಸಲಹೆ ನೀಡಿದ್ದರು ಎಂಬುದನ್ನು ಹೇಳಿಲ್ಲ, ಅದನ್ನು ಹೇಳುವುದೂ ಕೂಡ ಚೆನ್ನಾಗಿರುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ತನ್ಮೂಲಕ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮ ಅವರ ಹೇಳಿಕೆಗೆ ಸೂಚ್ಯವಾಗಿ ತಿರುಗೇಟು ನೀಡಿದ್ದಾರೆ. ವರ್ಗಾವಣೆ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಕೆಲ ವರ್ಗಾವಣೆ ಸರಿ ಎನಿಸಿಲ್ಲ ಎನ್ನುವ ಕಾರಣಕ್ಕಾಗಿ ನಿಲ್ಲಿಸಿದ್ದೇವೆ. ಅದೆನ್ನೆಲ್ಲಾ ನೋಡಿ ಸರಿಪಡಿಸಿ ವರ್ಗಾವಣೆ ಮಾಡುತ್ತೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

HDK ಪ್ರೆಸ್​​ಮೀಟ್​​​.. ಸಚಿವರಿಗೆ ಟೆನ್ಷನ್​​.. ಟೆನ್ಷನ್​​​..!