Publish Date: Wed, 27 Sep 2023 (18:47 IST)
Updated Date: Wed, 27 Sep 2023 (18:50 IST)
ಲೋಕಸಭಾ ಚುನಾವಣೆಗೆ JDS-BJP ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ H.D.ದೇವೇಗೌಡ ಹೇಳಿಕೆ ನೀಡಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿ ಜೊತೆ ಚರ್ಚೆ ಮಾಡಿದ್ದೇವೆ. ನನ್ನ ಪಕ್ಷದ 19 ಶಾಸಕರು, MLCಗಳ ಜೊತೆ ಚರ್ಚಿಸಿದ್ದೇವೆ ಎಂದರು. ಅಲ್ಲದೇ ಮೈತ್ರಿ ವಿಚಾರವಾಗಿ ಮೋದಿ ಅವರನ್ನ ಭೇಟಿ ಮಾಡಿಲ್ಲ ಎಂದ ಅವರು, ಪಕ್ಷವನ್ನು ಉಳಿಸಲು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.