Select Your Language

Notifications

webdunia
webdunia
webdunia
webdunia

ಮಕ್ಕಳ ಬಂಧನ ಬೆನ್ನಲ್ಲೇ ಎಚ್ ಡಿ ರೇವಣ್ಣಗೆ ಇನ್ನೊಂದು ಸಂಕಷ್ಟ: ಆಸ್ಪತ್ರೆಗೆ ದಾಖಲು

HD Revanna

Krishnaveni K

ಬೆಂಗಳೂರು , ಬುಧವಾರ, 17 ಜುಲೈ 2024 (16:05 IST)
ಬೆಂಗಳೂರು: ಮಕ್ಕಳಿಬ್ಬರೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿರುವಾಗಲೇ ಶಾಸಕ ಎಚ್ ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಲು ಜಾರಿ ಬಿದ್ದು ಪೆಟ್ಟುಮಾಡಿಕೊಂಡಿರುವ ಅವರೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಚ್ ಡಿ ರೇವಣ್ಣ ಹೊಳೆನರಸೀಪುರದ ಹರದನಹಳ್ಳಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು ಆಷಾಢ ಏಕಾದಶಿಯಾಗಿದ್ದು ಉಪವಾಸವಿದ್ದು ದೇವರ ದರ್ಶನ ಮಾಡಲು ಬಂದಿದ್ದಾರೆ. ಆದರೆ ಪೂಜೆ ಸಲ್ಲಿಸಿ ಬರುವಾಗ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರು ಪಕ್ಕೆಲುಬಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯಕ್ಕೆ ಹೊಳೆನರಸೀಪುರದ ಸರ್ಕಾರೀ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಜೊತೆಗೆ ಇಡೀ ರೇವಣ್ಣ ಕುಟುಂಬವೇ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟದಲ್ಲಿದೆ. ಈ ನಿಮಿತ್ತ ದೇವರಲ್ಲಿ ಮಕ್ಕಳನ್ನು ಕಾಪಾಡು ಎಂದು ಪ್ರಾರ್ಥನೆ ನಡೆಸಲು ಬಂದಿದ್ದರು. ಈ ವೇಳೆಯೇ ಕಾಲು ಜಾರಿ ಬಿದ್ದು ಪೆಟ್ಟುಮಾಡಿಕೊಂಡಿದ್ದು ವಿಪರ್ಯಾಸ.

ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಕೂಡಾ ಬಂಧಿತರಾಗಿದ್ದರು. ಆದರೆ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ನಿನ್ನೆಯಷ್ಟೇ ಸದನದಲ್ಲೂ ಅವರು ಭಾಗಿಯಾಗಿ ತಮ್ಮ ಕುಟುಂಬದ ಮೇಲಿರುವ ಪ್ರಕರಣಗಳ ಬಗ್ಗೆ ಭಾವುಕರಾಗಿ ಮಾತನಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೇ ಕನ್ನಡಿಗರಿಗೆ ಮೀಸಲಾತಿ ಟ್ವೀಟ್ ನ್ನೇ ಡಿಲೀಟ್ ಮಾಡಿಬಿಟ್ಟ ಸಿದ್ದರಾಮಯ್ಯ