Publish Date: Wed, 25 Sep 2019 (20:10 IST)
Updated Date: Wed, 25 Sep 2019 (20:12 IST)
ಮೈತ್ರಿ ಸರಕಾರ ಉರುಳಿಸೋಕೆ ಮುಂದಾದವರನ್ನು ಬೈ ಎಲೆಕ್ಷನ್ ನಲ್ಲಿ ಸೋಲಿಸೋಕೆ ಹೆಚ್.ಡಿ.ಕೆ ರಣತಂತ್ರ ಹೆಣೆಯುತ್ತಿದ್ದಾರೆ.
ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿಯನ್ನ ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯಾಗಿಸಿರೋ ಹೆಚ್.ಡಿ.ಕುಮಾರಸ್ವಾಮಿ, ಅನರ್ಹ ಶಾಸಕ ಸುಧಾಕರ್ ರನ್ನ ಸೋಲಿಸೋಕೆ ಪಣ ತೊಟ್ಟಿದ್ದಾರೆ.
ಮಾಜಿ ಶಾಸಕ ಬಚ್ಚೇಗೌಡ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದ್ದು, ಸುಧಾಕರ್ ಸೋಲಿಗೆ ಜೆಡಿಎಸ್ ಶತಾಯುಗತಾಯ ಯತ್ನಿಸುತ್ತಿದೆ.
ಮೈತ್ರಿ ಸರಕಾರದಲ್ಲಿ ಸುಧಾಕರ್ ನಡೆ ಹೆಚ್.ಡಿ.ಕೆಗೆ ಕೋಪ ತರಿಸಿತ್ತು ಎನ್ನಲಾಗುತ್ತಿದೆ.