Daily Horoscope
✕

ಸಿಎಂ ಬಫೂನ್ ಥರಾ ಹೇಳಿಕೆ ಕೊಡಬಾರದು: ಬಿಜೆಪಿ 50 ಕೋಟಿ ಆಮಿಷಕ್ಕೆ ಕುಮಾರಸ್ವಾಮಿ ಟಾಂಗ್

Krishnaveni K
ಶುಕ್ರವಾರ, 15 ನವೆಂಬರ್ 2024 (12:24 IST)
ಮೈಸೂರು: ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ’50 ಕೋಟಿ ರೂ. ಹೇಳಿಕೆ ಕೊಟ್ಟಿದ್ದಾರೆ ಎಂದರೆ ಎಸ್ಐಟಿ ರಚನೆ ಮಾಡಿ ತನಿಖೆ ಮಾಡಲಿ. ಸಿಎಂ ಆಗಿದ್ದುಕೊಂಡು ಬಫೂನ್ ಗಳ ರೀತಿ ಹೇಳಿಕೆ ಕೊಡಬಾರದು’ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

‘ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳು ಹಾಗೂ ಹಲವಾರು ಮಂತ್ರಿಗಳು 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಅವರು ಈ ರಾಜ್ಯದ ಮುಖ್ಯಮಂತ್ರಿಗಳು. ಅವರ ಗಮನಕ್ಕೆ ಬಾರದೇ ಆ ರೀತಿ ಆಗಲು ಸಾಧ್ಯವಿಲ್ಲ. ಇದು ಯಾರೋ ಬಫೂನ್ ಗಳು ಕೊಡುವ ರೀತಿ ಹೇಳಿಕೆ ಆಗಬಾರದು.

50 ಜನರಿಗೆ 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸರ್ಕಾರ ಈಗಾಗಲೇ ಹಲವು ಎಸ್ಐಟಿ ರಚನೆ ಮಾಡಿದೆ. ಬಹುಶಃ ರಾಜ್ಯದ ಮಾತ್ರವಲ್ಲ, ದೇಶದ ಇತಿಹಾಸದಲ್ಲೇ ಈ ಮಟ್ಟಿಗೆ ಎಸ್ಐಟಿ ರಚನೆ ಮಾಡಿಲ್ಲ. ಹೀಗಾಗಿ ಇದಕ್ಕೂ ಒಂದು ಎಸ್ಐಟಿ ರಚನೆ ಮಾಡಿ ತನಿಖೆ ಮಾಡಲಿ. ಇಲ್ಲದೇ ಇದ್ದರೆ ಮುಖ್ಯಮಂತ್ರಿಗಳ ಮತ್ತು ಅವರ ಸಚಿವ ಸಂಪುಟದ ಹೇಳಿಕೆಗಳು ಜನರಿಗೆ ಒಂದು ಹಾಸ್ಯಾಸ್ಪದ ಎನಿಸಬಹುದು’ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವಿಸಿದ ಅನ್ಯಕೋಮಿನವರು: ವಿಡಿಯೋ ಹಂಚಿ ಬಿಜೆಪಿ ಆಕ್ರೋಶ Video

ಮೇಲ್ಮನೆ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ಸಂಜೆ ಮನೆಗೆ ತೆರಳುವ ಮುನ್ನ ಎಚ್ಚರ

ಅಬ್ಬಾ ಎಂಥಾ ಭಯಾನಕ ದೃಶ್ಯ…ಪೊಲೀಸ್ ಠಾಣೆಯಲ್ಲೇ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಎದೆ ಝಲ್ಲೆನಿಸುತ್ತದೆ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments