Webdunia - Bharat's app for daily news and videos

Install App

ಬಿಡದಿಗೆ ಸಿಎಂ ಬರಬಹುದು ಎಂದು ಕಾಯುತ್ತಾ ಕೂತೆ.. ಆದರೆ ಬರಲೇ ಇಲ್ಲ..: ಎಚ್ ಡಿ ಕುಮಾರಸ್ವಾಮಿ

ಕೃಷ್ಣವೇಣಿ ಕೆ
ಶನಿವಾರ, 27 ಜೂನ್ 2026 (17:43 IST)
ರಾಮನಗರ: ಬಿಡದಿ ಟೌನ್ ಶಿಪ್ ವಿವಾದದ ವಿರುದ್ಧ ಇಂದು ಎಚ್ ಡಿ ಕುಮಾರಸ್ವಾಮಿ ಭೈರಮಂಗಲದಲ್ಲಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಡದಿಯಲ್ಲಿ ಇಂದು ರೈತರ ಸಮ್ಮುಖದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ ನಡೆಸಿದರು. ಈ ವೇಳೆ ಹಲವರು ಟೌನ್ ಶಿಪ್ ವಿರೋಧಿಸಿ ಹಸಿರು ಬಾವುಟ ಧರಿಸಿ ಬಂದಿದ್ದರೆ ಟೌನ್ ಶಿಪ್ ಪರ ಇರುವ ಕೆಲವರು ಕೆಂಪು ಶಾಲು ಧರಿಸಿ ಕೇಂದ್ರ ಸಚಿವರಿಗೆ ವಿರೋಧ ಸೂಚಿಸಿದ್ದರು.

ಇಂದಿನ ಸಭೆಗೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಮೊನ್ನೆಯೇ ಕುಮಾರಸ್ವಾಮಿ ಆಹ್ವಾನವಿತ್ತಿದ್ದರು. ಆದರೆ ಅವರು ಬರದೇ ಇರುವ ಕಾರಣಕ್ಕೆ ವಾಗ್ದಾಳಿ ನಡೆಸಿದ ಎಚ್ ಡಿಕೆ ‘ಬಿಡದಿ ಉಪನಗರ ಯೋಜನೆಗಾಗಿ ಸರಕಾರ ಅನ್ಯಾಯವಾಗಿ ಫಲವತ್ತಾದ ಕೃಷಿ ಭೂಮಿ ಕಸಿದುಕೊಳ್ಳುತ್ತಿರುವ ಬಗ್ಗೆ  ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಲು ನಾನು ಭೈರಮಂಗಲದಲ್ಲಿ ರೈತರ ವೇದಿಕೆಯಲ್ಲಿ ಪಾಲ್ಗೊಂಡು ಅವರಿಗಾಗಿ ನಿರೀಕ್ಷಿಸಿದೆ.

ವಿಧಾನಸೌಧಕ್ಕೆ ಚರ್ಚೆಗೆ ಕರೆದಿದ್ದ ಮುಖ್ಯಮಂತ್ರಿಗಳು ಬಿಡದಿಗೆ ಬರಬೇಕೆಂದು ಪತ್ರ ಬರೆದಿದ್ದರು. ಆದರೆ, ನೊಂದ ರೈತರ ಸಮ್ಮುಖದಲ್ಲಿ ಚರ್ಚೆ ನಡೆಯಬೇಕೆಂದು ನಾನು ವಿನಂತಿ ಮಾಡಿದ್ದೆ. ಆದರೆ ಅವರಿಗೆ 'ಬಿಡುವಿಲ್ಲದ' ಕಾರಣಕ್ಕೆ ಸಭೆಯಲ್ಲಿ ನಾನೊಬ್ಬನೇ ರೈತರೊಂದಿಗೆ ಸಂವಾದ ನಡೆಸಿದೆ. ಮುಖ್ಯಮಂತ್ರಿಗಳ ಗೈರು ಹಾಜರಿ ರೈತರ ಸಮಸ್ಯೆಗಳಿಗೆ ಉತ್ತರವಲ್ಲ ಮತ್ತು ಪರಿಹಾರವೂ ಅಲ್ಲ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಲು ರೈತರು ಸಿದ್ಧರಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರು ದೇಶದ ನಿಜವಾದ ಶಕ್ತಿ: ರಾಹುಲ್ ಗಾಂಧಿ

ಹೋಂ ಸ್ಟೇಗೆ ಎಂಜಾಯ್ ಮಾಡಲು ಹೋಗಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

ರೇಪ್ ಕೇಸ್ ಮುಚ್ಚಿ ಹಾಕಲು ಪಂಜಾಬ್ ಸಿಎಂ ಪತ್ನಿ ಲಂಚದ ಬೇಡಿಕೆ, ತನಿಖೆಗೆ ನೋಟಿಸ್ ಜಾರಿ

ಆಟೋದಲ್ಲಿ ಫ್ರೀ ಆಗಿ ಕರೆದೊಯ್ಯಲಿಲ್ಲ ಎಂದು ಚಾಲಕನ ಮೇಲೆ ಇದೆಂಥಾ ಅನ್ಯಾಯವೆಸಗಿದ ಪೊಲೀಸ್ ಅಧಿಕಾರಿ Video

ರಾಜೀನಾಮೆಗೆ ಒತ್ತಾಯದ ನಡುವೆ ಬಿ ನಾಗೇಂದ್ರ ಹೊಸ ಜವಾಬ್ದಾರಿ ವಹಿಸಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments