Select Your Language

Notifications

webdunia
webdunia
webdunia
webdunia

ಅಪ್ಪ ಕಲಿಸಿಕೊಟ್ಟ ಪಾಠ ನಂಗೆ, ಎಲ್ಲಾ ದಾಖಲೆ ಇದೆ ಯಾವುದಕ್ಕೂ ಹೆದರಲ್ಲ: ಎಚ್ ಡಿ ಕುಮಾರಸ್ವಾಮಿ

HD Kumaraswamy

Krishnaveni K

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (12:47 IST)
ಬೆಂಗಳೂರು: ತಮ್ಮ ವಿರುದ್ಧ ಎಸ್ ಐಟಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

‘ನನ್ನ ಮೇಲೆ ಬೇಕಾ ಬಿಟ್ಟಿ ಭೂಮಿ ನೀಡಿದ ಆರೋಪ ಹೊಂದಿರುವ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆ ಅಕ್ರಮದ ಬಗ್ಗೆ ದಾಖಲೆಗಳೇ ನನ್ನಲ್ಲಿದೆ. ಇದು ಒಂದು ರೀತಿಯಲ್ಲಿ ಡೆಡ್ ಕೇಸ್. ಇದರ ಬಗ್ಗೆ ನನ್ನಲ್ಲಿ 10 ನಿಮಿಷ ಸ್ಪಷ್ಟನೆ ಕೇಳಿದ್ದರೆ ಸಾಕಿತ್ತು. ಇದಕ್ಕೆ ರಾಜ್ಯಪಾಲರ ಅನುಮತಿ ಕೇಳುವ ಅಗತ್ಯವೇನಿತ್ತು?’ ಎಂದು ದಾಖಲೆಗಳನ್ನು ತೋರಿಸಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

‘ಸಿದ್ದರಾಮಯ್ಯನವರು ನನ್ನ ಮೇಲೆ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಕೊಚ್ಚಿಕೊಳ್ಳುತ್ತಾರೆ. ಲೋಕಾಯುಕ್ತದಲ್ಲಿ ಸಿದ್ದರಾಮಯ್ಯನವರದ್ದು ತನಿಖೆಯಾಗದೇ ಉಳಿದಿರುವ 50 ಕೇಸ್ ಗಳಿವೆ. ಆದರೂ ನನ್ನದು ತೆರೆದ ಪುಸ್ತಕ, ಹಿಂದುಳಿದ ನಾಯಕ ಎಮದು ಹೇಳಿಕೊಳ್ಳುತ್ತಾರೆ. ಈ ಸರ್ಕಾರದಲ್ಲಿ ರಾತ್ರೋ ರಾತ್ರಿ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ನನ್ನನ್ನು ಹೇಗೆ ಹಣಿಯಬಹುದು ಎಂದು ಸಭೆ ನಡೆಯುತ್ತದೆ. ಎಲ್ಲಾ ಮಾಹಿತಿಗಳೂ ನನಗೆ ಗೊತ್ತು’ ಎಂದಿದ್ದಾರೆ.

ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆ ಕೋರ್ಟ್ ನ್ನೇ ಯಾಮಾರಿಸಿತ್ತು. ನಮ್ಮಪ್ಪ ನನಗೆ ಕಲಿಸಿದ ಪಾಠ ಇದು. ಈ ದಾಖಲೆಗಳೆಲ್ಲಾ ಅಧಿಕಾರಿಗಳ ಬಳಿ, ಸರ್ಕಾರದ ಬಳಿ ಇರುತ್ತೋ ಇಲ್ವೋ. ಆದರೆ ನಾನು ಎಲ್ಲವನ್ನೂ ಭದ್ರವಾಗಿಟ್ಟುಕೊಂಡಿದ್ದೇನೆ. ನನ್ನ ಸಹಿ, ನಾನು ಸಹಿ ಹಾಕಿ ಬೇಕಾಬಿಟ್ಟಿ ಭೂಮಿ ಕೊಟ್ಟಿದ್ದೇನೆ ಎಂದು ಆರೋಪ ಮಾಡ್ತಿದ್ದಾರೆ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ. ಯಾವುದಕ್ಕೂ ನಾನು ಹೆದರುವವನಲ್ಲ. ಏನಾಗುತ್ತದೋ ನೋಡೋಣ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ಮೊದಲಿನಂತೆ ಸರ್ಕಾರ ನಡೆಸಲಾಗುತ್ತಿಲ್ಲ ಎಂಬುದಕ್ಕೆ ಈ ನಾಲ್ಕು ಘಟನೆಗಳೇ ಸಾಕ್ಷಿ