Publish Date: Tue, 15 May 2018 (08:45 IST)
Updated Date: Tue, 15 May 2018 (10:35 IST)
ಬೆಂಗಳೂರು: ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗುವ ದಿನ ಇಂದು. ಈಗಾಗಲೇ ನಾಯಕರ ಎದೆಯಲ್ಲಿ ಢವ ಢವ ಶುರುವಾಗಿದೆ. ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ.
ಬೆಳ್ಳಂ ಬೆಳಿಗ್ಗೆಯೇ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ಕಾಲಭೈರವೇಶ್ವರ ಸನ್ನಿಧಾನಕ್ಕೆ ತೆರಳಿದ ಕುಮಾರಸ್ವಾಮಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.
ನಂತರ ಪತ್ನಿ ಸಮೇತರಾಗಿ ಟಿವಿ ಮುಂದೆ ಕೂತು ಫಲಿತಾಂಶ ವೀಕ್ಷಿಸಲು ತೊಡಗಿದ್ದಾರೆ. ನಿನ್ನೆಯಷ್ಟೇ ಕುಮಾರಸ್ವಾಮಿ ಎರಡು ದಿನಗಳ ಸಿಂಗಾಪುರ ಪ್ರವಾಸ ಮುಗಿಸಿ ಆಗಮಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.